ಗಲ್ಫ್ ಉದ್ಯಮಿ ಕೊಲೆ ಪ್ರಕರಣ: ಮಂತ್ರವಾದದ ಹೆಸರಲ್ಲಿ ಲಪಟಾಯಿಸಿದ ಚಿನ್ನದಲ್ಲಿ 479 ಪವನ್ ಚಿನ್ನ ಪತ್ತೆಗೆ ಇನ್ನೂ ಬಾಕಿ
ಕಾಸರಗೋಡು: 2023 ಎಪ್ರಿಲ್ 14ರಂದು ಗಲ್ಫ್ ಉದ್ಯಮಿ ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ರ ಕೊಲೆ ಪ್ರಕರಣಕ್ಕೆ ಸಂಬAಧಿಸಿ ಆರೋಪಿಗಳು ಮಂತ್ರವಾದದ ಹೆಸರಲ್ಲಿ ಲಪಟಾಯಿ ಸಿರುವುದಾಗಿ ಆರೋಪಿಸಲಾಗು ತ್ತಿರುವ 596 ಪವನ್ (4.76 ಕಿಲೋ) ಚಿನ್ನದಲ್ಲಿ 479 ಪವನ್ ಪತ್ತೆಹಚ್ಚಲು ಇನ್ನೂ ಬಾಕಿ ಉಳಿದುಕೊಂಡಿದೆ.
ಹೀಗೆ ಲಪಟಾಯಿಸಿದ ಒಟ್ಟು ಚಿನ್ನದ ಪೈಕಿ 117 ಪವನ್ ಚಿನ್ನವನ್ನು ಮಾತ್ರವೇ ವಿವಿಧ ಚಿನ್ನದಂಗಡಿಗಳು ಮತ್ತು ಬ್ಯಾಂಕ್ಗಳಿAದ ಪತ್ತೆಹಚ್ಚಿ ವಶಪಡಿಸಲು ಪೊಲೀಸರಿಗೆ ಈತನಕ ಸಾಧ್ಯವಾಗಿದೆ. ಲಪಟಾಯಿಸಿದ ಚಿನ್ನದಲ್ಲಿ ಒಂದು ಪಾಲನ್ನು ಆರೋಪಿಗಳು ವಿವಿಧ ಚಿನ್ನದಂಗಡಿ ಗಳಿಗೆ ಮಾರಾಟ ಮಾಡಿದ್ದರು. ಇನ್ನೊಂದು ಪಾಲನ್ನು ಬ್ಯಾಂಕ್ನಲ್ಲಿ ಅಡವಿರಿಸಿ ರುವುದಾಗಿ ಪೊಲೀಸ್ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಆದ್ದರಿಂದ ಬಾಕಿ ಚಿನ್ನವನ್ನು ಪತ್ತೆಹಚ್ಚಿ ವಶಪಡಿಸುವ ಯತ್ನವನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ. ಇದಕ್ಕಾಗಿ ಆರೋಪಿಗಳನ್ನು ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ತನಿಖಾ ತಂಡ ಸಲ್ಲಿಸಿದ ಅರ್ಜಿಯನ್ನು ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಇಂದು ಪರಿಗಣಿ ಸಲಿದೆ ಮಾತ್ರವಲ್ಲ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯ ಇಂದು ಪರಿಶೀಲಿಸಲಿದೆ.
ಈ ಕೊಲೆಗೆ ಸಂಬAಧಿಸಿ ಆರೋಪಿಗಳು ತಮ್ಮ ಮೊಬೈಲ್ ಫೋನ್ನಿಂದ 4 ಲಕ್ಷದಷ್ಟು ವಾಟ್ಸಪ್ ಇತ್ಯಾದಿ ಸಂದೇಶಗಳು ಮತ್ತು ವೀಡಿಯೋಗ ಳನ್ನು ಕಳುಹಿಸಿಕೊಟ್ಟಿರುವುದಾಗಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದ್ದು, ಅದರಿಂದಾಗಿ ಸೈಬರ್ ಸೆಲ್ನ ಸಹಾಯದೊಂದಿಗೆ ಆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುವ ಯತ್ನದಲ್ಲೂ ಪೊಲೀಸರು ತೊಡಗಿದ್ದಾರೆ.
ಉದುಮ ಬಾರ ಮೀತ್ತಲ್ ಮಾಂuಟಿಜeಜಿiಟಿeಜಡ್ ಕುಳಕುನ್ನಿನಲ್ಲಿ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್(ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಶಮೀಮಾ ಕೆ.ಎಚ್ (35), ಪೂಚಕ್ಕಾಡಿನ ಅಸ್ಸೀಫಾ ಟಿ.ಎಂ. (36) ಮತ್ತು ಮಧೂರು ಕೊಲ್ಯದ ಆಯಿಷ (43) ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರು ಈಗ ನ್ಯಾಯಾಂಗ ಬಂ ಧನದಲ್ಲಿದ್ದಾರೆ. ಇವರ ಹೊರತಾಗಿ ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿರ ಬಹುದೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.