ಗಾಂಜಾ ಪತ್ತೆ: ಓರ್ವ ಸೆರೆ
ಕಾಸರಗೋಡು: ನಗರದ ತಾಯಲಂಗಾಡಿಯಲ್ಲಿ ಕಾಸರ ಗೋಡು ಪೊಲೀಸ್ ಠಾಣೆಯ ಎಸ್‌ಐ ಅಬ್ದುಲ್ ರಜಾಕ್ ಪಿ.ಕೆ.ರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೪೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿ ಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ತಾಯಲಂಗಾಡಿ ವಳಪ್ಪಿಲ್ ಹೌಸ್‌ನ ನಿವಾಸಿ ಹಾಗೂ ಈಗ ಉಳಿಯತ್ತಡ್ಕ ಚೇನಕ್ಕೋಡಿನಲ್ಲಿ ವಾಸಿಸುತ್ತಿರುವ ಕೆ.ಇ. ಅಬ್ದುಲ್ ಖಾದರ್ (೬೧) ಎಂಬಾತನನ್ನುಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.