ಗಾಂಜಾ ಪ್ರಕರಣದಲ್ಲಿ ಸೆರೆ ಹಿಡಿಯಲು ಹೋದಾಗ ಪೊಲೀಸರಿಗೆ ಆಕ್ರಮಣ: ಆರೋಪಿ ಸೆರೆ
ಕಾಸರಗೋಡು: ಗಾಂಜಾ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಯನ್ನು ಸೆರೆಹಿಡಿಯಲು ಹೋದಾಗ ಪೊಲೀಸರಿಗೆ ಆಕ್ರಮಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸೆರೆಹಿಡಿದು ಕೇಸು ದಾಖಲಿಸಲಾಗಿದೆ. ಟೌನ್ ಸ್ಟೇಶನ್ ಸಿಪಿಒ ನೀರ್ಚಾಲು ನಿವಾಸಿ ಭಕ್ತಶೈವಲ್ ನೀಡಿದ ದೂರಿನಂತೆ ಈತನ ವಿರುದ್ಧ ಪೊಲೀಸರಿಗೆ ಆಕ್ರಮಣ ನಡೆಸಿದ ಬಗ್ಗೆಯೂ ಕೇಸು ದಾಖಲಿಸಲಾಗಿದೆ. ನಿನ್ನೆ ಹೈಯರ್ ಸೆಕೆಂಡರಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರಗಿದ್ದು, ಇದರಲ್ಲಿ ಗಾಂಜಾ ಮಾರಾಟ ನಡೆಸಲು ಸಾಧ್ಯತೆ ಇದೆಯೆಂಬ ಸೂಚನೆ ಮೇರೆಗೆ ಪೊಲೀಸರು ತಲುಪಿ ತನಿಖೆ ನಡೆಸುತ್ತಿದ್ದರು.
ಆ ವೇಳೆ 15, 16 ವರ್ಷ ಪ್ರಾಯದ ಇಬ್ಬರು ವಿದ್ಯಾರ್ಥಿಗಳಿಂದ 12.06 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಕಳನಾಡು ನಿವಾಸಿ ಸಮೀರ್ ಎಂಬಾತ ತಮಗೆ ಗಾಂಜಾ ನೀಡಿರುವುದಾಗಿ ತಿಳಿಸಿದ್ದು ಆತನ ವಿರುದ್ಧ ಕೇಸು ದಾಖಲಿಸಿ ಸೆರೆಹಿಡಿಯಲು ಪೊಲೀಸರು ಕಳನಾಡಿಗೆ ತಲುಪಿದ್ದಾರೆ. ಆ ವೇಳೆ ಪೊಲೀಸರ ಕೈ ಹಿಡಿದು ತಿರುಗಿಸಿ ಆಕ್ರಮಣ ನಡೆಸಿರುವುದಾಗಿ ನೀಡಿದ ದೂರಿನಂತೆ ಈಗ ಆತನ ವಿರುದ್ಧ ಮತ್ತೊಂದು ಕೇಸು ದಾಖಲಿಸಲಾ ಗಿದೆ. ಆರೋಪಿಯನ್ನು ಸೆರೆಹಿಡಿಯ ಲಾಗಿದ್ದು, ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿಕೊ ಡಲಾಗಿದೆ. ಮೇಲ್ಪರಂಬ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.