ಗಾಂಜಾ, ಮದ್ಯ ವಶ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ೫೦ ಗ್ರಾಂ ಗಾಂಜಾ ಮತ್ತು ಅಮಿತವಾಗಿ ಕೈವಶವಿರಿಸಿಕೊಂಡಿದ್ದ ೪ ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ.
ಕಾಸರಗೋಡು ಐಬಿ ನೀಡಿದ ಗುಪ್ತ ಮಾಹಿತಿಯಂತೆ ಕಾಸg ಗೋಡು ಅಬಕಾರಿ ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ ಅವರ ನೇತೃತ್ವದ ಅಬಕಾರಿ ತಂಡ ಬೆಂಡಿಚ್ಚಾ ಲ್‌ನಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ೫೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಮೊಹ ಮ್ಮದ್ ನಿಜಾಸ್ ಕೆ (೨೧) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಜಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಪ್ರಿವೆಂಟೀವ್ ಆಫೀಸರ್ ಉಣ್ಣಿ ಕೃಷ್ಣನ್, ಸಿಇಒಗಳಾದ ಶರತ್ ಕೆ.ಪಿ, ಧನ್ಯ ಟಿ.ವಿ, ಚಾಲಕ ಸುಮೋದ್ ಕುಮಾರ್ ಎಂ.ಬಿ ಮತ್ತು ಐಬಿ ಪ್ರಿವೆಂಟೀವ್ ಆಫೀಸರ್‌ಗಳಾದ ಜೇಕಬ್, ದಿವಾಕರನ್, ಸುರೇಶನ್ ಪಿ ಎಂಬಿವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.
ಬೇಡಡ್ಕ ಕಾರಕ್ಕೋಡ್ ಎಂಬಲ್ಲಿ ಬಂದಡ್ಕ ಅಬಕಾರಿ ರೇಂಜ್‌ನ ಎಕ್ಸೈಸ್ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಶೇಖ್ ಅಬ್ದುಲ್ ಬಷೀರ್ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.
ಕಾರಕ್ಕೋಡು ನಿವಾಸಿ ಗಿರೀಶ್ ಸಿ (೩೩) ಬಂಧಿತ ಆರೋಪಿ. ೪ ಲೀಟರ್ ಮದ್ಯವನ್ನು ಆತನಿಂದ ವಶಪಡಿಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.