ಉಪ್ಪಳ: ಮಂಗಲ್ಪಾಡಿಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 10 ಗ್ರಾಂ ಗಾಂಜಾ ಮತ್ತು 0.21 ಗ್ರಾಂ ಮೆಥಾಫಿಟಮಿನ್ ಕೈವಶವಿರಿಸಿ ಕೊಂಡ ಆರೋಪದಂತೆ ಯುವಕನೋರ್ವನನ್ನು ಬಂಧಿಸಿದೆ. ಮಂಗಲ್ಪಾಡಿ ಪತ್ವಾಡಿ ಮಜಲ್ ನಿವಾಸಿ ಶೇಖ್ ಸುಬ್ಬಾನ್ ಅಹಮ್ಮದ್ (26) ಬಂಧಿತನಾದ ಯುವಕ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಗ್ರೇಡ್ ಪ್ರಿವೆಂಟಿವ್ ಆಫೀಸರ್ ನೌಶಾದ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸೋನು ಸೆಬಾಸ್ಟಿಯನ್, ಅತುಲ್ ಟಿ.ವಿ, ಶಿಜಿತ್ ವಿ. ಮತ್ತು ರೀನಾ ವಿ. ಎಂಬವರು ಒಳಗೊಂಡಿದ್ದರು.