ಗಾಂಜಾ ಸಹಿತ ಓರ್ವ ಸೆರೆ
ಮಂಜೇಶ್ವರ: ಗಾಂಜಾ ಕೈವಶವಿರಿಸಿಕೊಂಡ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ಮಿತ್ತನಡ್ಕ ಕರೋಪಾಡಿಯ ಮೊಹಮ್ಮದ್ ಸಜಾಫ್ (28) ಎಂಬಾತನನ್ನು ಮಂಜೇಶ್ವರ ಎಸ್‌ಐ ರತೀಶ್ ಸೆರೆಹಿಡಿದಿದ್ದಾರೆ. ಆರೋಪಿಯ ಕೈಯಿಂದ 08.70 ಗ್ರಾಂ ಗಾಂಜಾ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಗುವೆದಪಡ್ಪು ಬಸ್ ತಂಗುದಾಣ ಬಳಿ ನಿಂತಿದ್ದ ಈತನ ಕೈಯಲ್ಲಿ ಗಾಂಜಾ ಪತ್ತೆಯಾಗಿತ್ತು.