ನವದೆಹಲಿ: ಪ್ಯಾಲಸ್ತಿನ್‌ನ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಆರಂಭಗೊಂಡು ಇಂದಿಗೆ ೩೧ ದಿನಗಳಾಗಿದ್ದು, ಗಾಜಾ ಪಟ್ಟಿ ಯಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ೪೫೦ ಹಮಾಸ್ ಗುಹೆಗಳನ್ನು ನಾಶಪಡಿ ಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇದರಲ್ಲಿ ಹಮಾಸ್‌ನ ಪ್ರಮುಖ ಕಮಾಂಡರ್ ಜಮಾಲ್ ಮೂಸಾ ಕೂಡಾ ಹತನಾಗಿರು ವುದಾಗಿ ಇಸ್ರೇಲ್ ತಿಳಿಸಿದೆ. ನಮ್ಮ ಸೇನೆಯಿಂದ ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ ಅದರಲ್ಲಿ ಗಾಜಾ ನಗರ ಪೂರ್ಣ ವಾಗಿ ನಮ್ಮ ನಿಯಂತ್ರಣಕ್ಕೆ ಬಂದಿದೆ. ಉತ್ತರ ಗಾಜಾದಲ್ಲಿ ದೊಡ್ಡ ಪ್ರಮಾಣದ ದಾಳಿ ಮುಂದುವರಿ ಸುತ್ತಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.