ಗಾಯಕಿಯ ಮಾನಭಂಗ ದೂರು: ಗಾಯಕ ರಿಯಾಸ್ ಸೆರೆ

ಕಾಸರಗೋಡು: ಗಾಯಕಿ ಹಾಗೂ ಗೃಹಿಣಿಯಾದ ಯುವತಿಯನ್ನು  ಮಾನಭಂಗ ಪಡಿಸಿರುವುದಾಗಿ ನೀಡಿದ ದೂರಿನಂತೆ ಮಾಪಿಳಪ್ಪಾಟು ಗಾಯಕನನ್ನು ಪೊಲೀಸರು ಸೆರೆ ಹಿಡಿದರು. ಆಲಂಪಾಡಿಯ ರಿಯಾಸ್ ಎಂಬ ಪಟ್ಟುರುಮಾಲ್ ರಿಯಾಸ್‌ನನ್ನು ಚಿತ್ತಾರಿಕಲ್ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವನ್ ವಲಿಯವಳಪ್ಪ್ ಹಾಗೂ ತಂಡ ಸೆರೆ ಹಿಡಿದಿದೆ. ಸೆರೆ ದಾಖಲಿಸಿದ ಬಳಿಕ ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

26ರ ಹರೆಯದ ಗೃಹಿಣಿ ದೂರು ನೀಡಿದ್ದಾರೆ. ಇವರಿಬ್ಬರೂ ವಿವಾಹ ಮನೆಗಳಲ್ಲಿ ಗಾನಮೇಳ ಪ್ರಸ್ತುತಪಡಿಸಲು ತೆರಳುತ್ತಿದ್ದಾರೆ.

ಈ ರೀತಿ ತೆರಳುತ್ತಿದ್ದ ಸಂದರ್ಭದಲ್ಲಿ ಒಂದು ಬಾರಿ ರಿಯಾಸ್ ತನ್ನನ್ನು ಮಾನಭಂಗ ಪಡಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆ ಬಳಿಕ ಈ ವಿಷಯ ಬಹಿರಂಗಗೊಳ್ಳದಿರಬೇಕಿದ್ದರೆ ಹಣ ನೀಡಬೇಕೆಂದು ಬೆದರಿಕೆ ಯೊಡ್ಡಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ.

You cannot copy contents of this page