ಗುತ್ತಿಗೆದಾರನಾದ ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ
ಬದಿಯಡ್ಕ: ಸ್ಕೂಟರ್ ಸವಾರ ನಾದ ಯುವಕನನ್ನು ಕಾರಿನಲ್ಲಿ ತಲುಪಿದ ವ್ಯಕ್ತಿ ತಡೆದು ನಿಲ್ಲಿಸಿ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಹಲ್ಲೆಯಿಂದ ಗಾಯ ಗೊಂಡ ನೆಕ್ರಾಜೆಯ ಮುಹಮ್ಮದ್ ಅಲಿ ಸಹದ್ (26)ರನ್ನು ಕಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಜೆಸಿಬಿ ಕೆಲಸದ ಗುತ್ತಿಗೆದಾರ ನಾದ ಮುಹಮ್ಮದ್ ಅಲಿ ಸಹದ್ ನಿನ್ನೆ ಸಂಜೆ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಸಿದ್ದಿಕ್ ಎಂಬಾತ ಕಾರಿನಲ್ಲಿ ತಲುಪಿ ಚೆರ್ಲಡ್ಕದಲ್ಲಿ ಅಟ್ಟಗಟ್ಟಿದ್ದಾನೆನ್ನ ಲಾಗಿದೆ. ಬಳಿಕ ತನ್ನ ಏರಿಯಾದಲ್ಲಿ ನೀನು ಕೆಲಸ ಗುತ್ತಿಗೆ ಪಡೆಯಕೂ ಡದೆಂದು ತಿಳಿಸಿ ಸಿದ್ದಿಕ್ ಹಲ್ಲೆಗೈದಿದ್ದಾನೆ. ಅನಂತರ ಅಲ್ಲಿಂದ ಸ್ಕೂಟರ್‌ನಲ್ಲಿ ಮರಳುತ್ತಿದ್ದಾಗ ಸಿದ್ದಿಕ್ ಕಾರನಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ ಬೀಳಿಸಿರುವುದಾಗಿಯೂ ಮುಹ ಮ್ಮದ್ ಅಲಿ ಸಹದ್ ಆರೋಪಿ ಸಿದ್ದಾರೆ.