ತೃಶೂರು: ಗುರುವಾಯೂರು ಶ್ರೀಕೃಷ್ಣ ಕ್ಷೇತ್ರ ದರ್ಶನ ನಡೆಸಲಿ ರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ನಾಳೆ ಬೆಳಿಗ್ಗೆ ೭.೪೦ಕ್ಕೆ ಶ್ರೀ ಕ್ಷೇತ್ರದಲ್ಲಿ ಕಮಲದ ಹೂವುಗಳಿಂದ ತುಲಾಭಾರ ಸೇವೆ ನಡೆಸುವರು. ಇದರ ಹೊರತಾಗಿ ಇತರ ಹಲವು ಹರಕೆ ಗಳನ್ನೂ ಅವರು ನೆರವೇರಿಸುವರು.
ಪ್ರಧಾನಿಯವರ ಸಂದ ರ್ಶನದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ ೬ರಿಂದ ೯ರ ತನಕ ಗುರುವಾಯೂರು ಕ್ಷೇತ್ರ ದಲ್ಲಿ ಬಿಗಿ ನಿಯಂತ್ರಣ ಏರ್ಪಡಿ ಸಲಾಗಿದೆ. ವಾಹನಗಳಿಗೂ ನಿಯಂತ್ರಣ ಏರ್ಪಡಿಸಲಾಗಿದೆ.
ಗುರುವಾಯೂರು ಕ್ಷೇತ್ರ ದಲ್ಲಿ ನಾಳೆ ೮೦ ಮದುವೆಗಳಿಗೆ ಹೆಸರು ನೋಂದಾಯಿಸಲಾಗಿದ್ದು, ಅದು ಯಾವುದೇ ಕಾರಣಕ್ಕೂ ಮೊಟಕು ಗೊಳ್ಳದೆಂದು ಶ್ರೀ ಕ್ಷೇತ್ರದ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರಮೋದಿ ಯವರು ನಾಳೆ ಗುರುವಾಯೂರು ಸಂದರ್ಶಿಸುವ ಹಿನ್ನೆಲೆಯಲ್ಲಿ ಗುರುವಾಯೂರು ನಗರಸಭೆ ಮತ್ತು ತಂಡಾನಾಶ್ಶೇರಿ, ಚುಂಡನ್, ನಾಟ್ಟಿಗೆ ವಲಪ್ಪಾಡ್ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಗಳಲ್ಲಿ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತೃಶೂರು ಜಿಲ್ಲಾಧಿ ಕಾರಿ ನಾಳೆ ರಜೆ ಘೋಷಿಸಿದ್ದಾರೆ. ಭದ್ರತೆಯ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ.