ಗೂಂಡಾ-ಪೊಲೀಸ್ ಸಂಬಂಧ: ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನ
ತಿರುವನಂತಪುರ: ಗೂಂಡಾ-ಪೊಲೀಸ್ ಸಂಬಂಧ ಚರ್ಚೆಯಾಗುವುದರೊಂದಿಗೆ ಮತ್ತೆ ಪೊಲೀಸ್ ನೇತೃತ್ವ ಕ್ರಮಕ್ಕೆ ಮುಂದಾಗಿದೆ. ಸಂಶಯವಿರು ವವರನ್ನು ನಿರೀಕ್ಷಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರಲ್ಲಿ ಮಣ್ಣು ಮಾಫಿಯಾದೊಂದಿಗೆ ಸಂಪರ್ಕವಿರುವ ೩೦ರಷ್ಟು ಅಧಿಕಾರಿಗಳು ಸೇರಿದ್ದಾರೆ. ಈ ಸರಕಾರ ಅಧಿಕಾರಕ್ಕೇರಿದ ಬಳಿಕ ಇದುವರೆಗೆ ೨೦ರಷ್ಟು ಅಧಿಕಾರಿಗಳನ್ನು ಗೂಂಡಾ ಸಂಬಂಧದ ಹೆಸರಲ್ಲಿ ಅಮಾನತುಮಾಡಲಾಗಿದೆ. ೨೩ ಮಂದಿಯನ್ನು ಕೈಬಿಡಲಾಗಿದೆ. ಇತ್ತೀಚೆಗೆ ೮೫೦ರಷ್ಟು ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ಸಿವಿಲ್ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಇದರಲ್ಲಿ ಓರ್ವ ಡಿವೈಎಸ್ಪಿ ಹಾಗೂ ೧೫ ಇನ್‌ಸ್ಪೆಕ್ಟರ್‌ಗಳು ಸೇರಿದ್ದಾರೆ.