ಗೂಡ್ಸ್ ಟೆಂಪೋ ಚಾಲಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಆಹಾರ ಸೇವಿಸಿ ನಿದ್ರಿಸಿದ್ದ ಗೂಡ್ಸ್ ಟೆಂಪೋ ಚಾಲಕ ಮನೆ ಬಳಿಯ ಶೆಡ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಮಾಂಙಾಡ್ ಕಾಯಿಲಂವಳಪ್ಪ್ ಹೌಸ್‌ನ ದಿ| ಅಪ್ಪಕುಂಞಿಯವರ ಪುತ್ರ ಪಿ.ವಿ. ವಿಶ್ವನಾಥನ್ (46) ಮೃತ ವ್ಯಕ್ತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ಇವರು ನಿದ್ರಿಸಿದ್ದರು. ಇಂದು ಮುಂಜಾನೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಂತೆ ಮನೆ ಬಳಿಯ ಶೆಡ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ತಾಯಿ ನಾರಾಯಣಿ, ಪತ್ನಿ ಮಂಜುಳ, ಮಕ್ಕಳಾದ ವಿಸ್ಮಯ, ಅನಯ್, ಸಹೋದರ-ಸಹೋದರಿಯರಾದ ಕುಂಞಿಕಣ್ಣನ್, ಮಾಧವಿ, ಲಕ್ಷ್ಮಿ, ಕುಮಾರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.