ಗೃಹ ಸಂದರ್ಶನಕ್ಕಾಗಿ ತಲುಪಿದ ಸಿಪಿಎಂ ನೇತಾರರ ಮೇಲೆ ಬಾಂಬೆಸೆತ: ಮಹಿಳೆಗೆ ಗಾಯ
ಕಾಸರಗೋಡು: ಗೃಹ ಸಂದರ್ಶನಕ್ಕಾಗಿ ತಲುಪಿದ ಸಿಪಿಎಂ ನೇತಾರರ ಮೇಲೆ ಸಿಪಿಎಂ ಕಾರ್ಯಕರ್ತ ಬಾಂಬೆಸೆದ ಘಟನೆ ನಡೆದಿದೆ. ಘಟನೆಯಲ್ಲಿ ಓವೆ ಮಹಿಳೆ ಗಾಯಗೊಂಡಿದ್ದಾರೆ. ಅಂಬಲತ್ತರ ಲಾಲೂರ್ ನಿವಾಸಿ ರತೀಶ್ ಯಾನೆ ಮಾಂದಿ ರತೀಶ್ ಎಂಬಾತ ಬಾಂಬೆಸೆದಿರುವುದಾಗಿ ದೂರಲಾಗಿದೆ.ಈತ ವಿವಿಧ ಪ್ರಕರಣಗಳಲ್ಲಿ ಆರೋಪಿಯೆಂದು ಹೇಳಲಾಗುತ್ತಿದೆ. ನೇತಾರರು ಗೃಹ ಸಂದರ್ಶನದ ಅಂಗವಾಗಿ ನಿನ್ನೆ ರಾತ್ರಿ ೯ ಗಂಟೆ ವೇಳೆ ಪಾರಪ್ಪಳ್ಳಿ ಕಣ್ಣೋತ್ ತಟ್ಟ್‌ನ ಸಮೀಪದ ಮನೆಗೆ ತಲುಪಿದಾಗ ಘಟನೆ ನಡೆದಿದೆ. ಅಂಬಲತ್ತರ ಲೋಕಲ್ ಸೆಕ್ರೆಟರಿ ಅನೂಪ್‌ಕುಂಬಳ, ಏಳನೇ ಮೈಲು ಲೋಕಲ್ ಸೆಕ್ರೆಟರಿ ಬಾಬುರಾಜ್, ಡಿವೈಎಫ್‌ಐ ವಲಯ ಕಾರ್ಯ ದರ್ಶಿ ಅರುಣ್, ಬಾಲಕೃಷ್ಣನ್ ಎಂಬಿವರ ಮೇಲೆ ಬೆಂಬೆಸೆದಿರುವು ದಾಗಿ ದೂರಲಾಗಿದೆ. ಇದರಿಂದ ಸಮೀಪದ ನೆರೆಮನೆ ನಿವಾಸಿ ಆಮಿನ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಕಾಞಂಗಾಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಬಳಿಕ ರತೀಶ್ ಪರಾರಿಯಾಗಿದ್ದಾನೆ. ಅಂಬಲತ್ತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.