ಗೋಳಿತ್ತಡ್ಕದಲ್ಲಿ ರಸ್ತೆ ಬದಿ ಕುಸಿತ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮೊಟಕು ಭೀತಿ
ಪೆರ್ಲ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿದೆ. ಹಲವೆಡೆಗಳಲ್ಲಿ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ತಂತಿಗಳಿಗೆ ಮರ ಬಿದ್ದು ಕಂಬಗಳು ಮುರಿದಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೊಟಕುಗೊಂಡಿವೆ. ಚೆರ್ಕಳ- ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಡ್ಕಸ್ಥಳ-ಪೆರ್ಲ ಮಧ್ಯೆಗಿನ ಗೋಳಿತ್ತಡ್ಕದಲ್ಲಿ ರಸ್ತೆ ಬದಿ ಗುಡ್ಡೆ ಕುಸಿದಿದೆ. ಇಲ್ಲಿನ ಬಿ.ಜಿ. ರಾಮ ಭಟ್ ಎಂಬವರ ಅಡಕೆ ತೋಟಕ್ಕೆ ಗುಡ್ಡೆ ಜರಿದು ಬಿದ್ದು ೫೦ಕ್ಕೂಹೆಚ್ಚು ಅಡಿಕೆ ಸಸಿಗಳು ಮಣ್ಣುಪಾಲಾಗಿವೆ. ಪಂಪ್ ಶೆಡ್ ಮಣ್ಣಿನಡಿಗೆ ಸೇರಿದೆ. ಚರಂಡಿ ವ್ಯವಸ್ಥೆ ಇಲ್ಲದೆ ಇರುವ ಕಾರಣ ಮರ್ತ್ಯ ಭಾಗದಿಂದ ಹರಿದು ಬಂದ ನೀರು ತೋಡಿಗೆ ಸೇರದೆ ಇರುವುದು ಗುಡ್ಡೆ ಕುಸಿಯಲು ಕಾರಣವೆನ್ನಲಾಗಿದೆ. ಗುಡ್ಡೆ ಕುಸಿದ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಬಿ.ಎಸ್. ಗಾಂಭೀರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.