ಗ್ರಾಮೀಣ ಜನರ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಕ್ರೀಡೆ, ಉತ್ಸವ ಸಹಕಾರಿ’
ಬದಿಯಡ್ಕ: ಗ್ರಾಮೀಣ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಕೆಸರುಗದ್ದೆ ಉತ್ಸವ ವೆÆದಲÁದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯವಿದೆ. ಹಳ್ಳಿ ಸಂಸ್ಕೃತಿ ಮತ್ತು ಜನಪದ ಕಲೆಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯವೂ ನಡೆಯುತ್ತದೆ ಎಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷ ಸುಬ್ರಾಯ ನಾಯ್ಕ ಟಿ. ಹೇಳಿದರು.
ಕೇರಳ ಮರಾಟಿ ಸಂರಕ್ಷಣಾ ಸಮಿತಿ ಬದಿಯಡ್ಕ ಪಂ. ಸಮಿತಿಯ ನೇತೃತ್ವದಲ್ಲಿ ನೀರ್ಚಾಲು ಓಣಿಯಡ್ಕ ಕೆಸರುಗದ್ದೆಯಲ್ಲಿ ಜರಗಿದ `ಗದೇಂತ್ ಏಕ್ ದೀಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಎಂಎಸ್‌ಎಸ್ ಬದಿಯಡ್ಕ ಪಂ. ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಓಣಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯÁಗಿ ಯೋಗೀಶ್ ಪಿ. ಮಾತನಾಡಿದರು. ಡಾ| ಜನಾರ್ಧನ ನಾಯ್ಕ್, ಶ್ಯಾಮಪ್ರಸಾದ ಮಾನ್ಯ, ನಾರಾಯಣ ನಾಯ್ಕ ಅಡ್ಕಸ್ಥಳ, ಕೃಷ್ಣ ನಾಯ್ಕ, ಬಾಲಕೃಷ್ಣ ನಾಯಡ್ಕ, ಮಾಹಿಲ ನಾಯ್ಕ ಉಪಸ್ಥಿತರಿದ್ದರು. ಸಮಾಜದ ಹಿರಿಯ ಕೃಷಿಕರು ಹಾಗೂ ನಿವೃತ್ತ ಸೇನಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬದಿಯಡ್ಕ ಸ್ವಾಗತಿಸಿ, ಬಾಲಕೃಷ್ಣ ಅಚ್ಚಾಯಿ ವಂದಿಸಿದರು. ಹಿರಿಯ ಕೃಷಿಕ ಕುಂಞ್ಞಪ್ಪ ನಾಯ್ಕ ಓಣಿಯಡ್ಕ ಧ್ವಜಾರೋಹಣಗೈದರು. ಕಬಡ್ಡಿ, ಹಗ್ಗಜಗ್ಗಾಟ, ಓಟದ ಸ್ಪರ್ಧೆಹಮ್ಮಿಕೊಳ್ಳಲÁಯಿತು.