ಗ್ರಾಮ ವಿಸ್ತರಣಾ ಅಧಿಕಾರಿ ಯುವತಿ ನಿಗೂಢ ಸ್ಥಿತಿಯಲ್ಲಿ ಸಾವು

ವಯನಾಡ್: ಗ್ರಾಮ ವಿಸ್ತರಣಾಧಿ ಕಾರಿಯಾದ ಯುವತಿ ಬಾಡಿಗೆ ಮನೆ ಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.  ವಯನಾಡ್ ಎಡವಗ ಪಂಚಾಯತ್ ಕಚೇರಿಯ ಗ್ರಾಮವಿಸ್ತರಣಾಧಿಕಾರಿ ಕೊಲ್ಲಂ ಮೈನಾಗಪ್ಪಳ್ಳಿ ನಿವಾಸಿಯಾದ ಪುತ್ತನ್‌ಪುರಿಯಲ್ ಎ. ಶ್ರೀಲತಾ (46) ಮೃತ ಯುವತಿ. ನಿನ್ನೆ ಬೆಳಿಗ್ಗೆ ಎಡವಗ ಪನ್ನಿಚ್ಚಾಲ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಇವರು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಮಾನಂತವಾಡಿಯ ಖಾಸಗಿ ಆಸ್ಪತ್ರೆಗೆ ತಲುಪಿಸಿ ಬಳಿಕ ಮೇಪಾಡಿ ಎಂಬಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಜೀವ ರಕ್ಷಿಸಲಾಗಲಿಲ್ಲ.  ಅಪರಿಮಿತವಾಗಿ ಮಾತ್ರೆ ಸೇವಿಸಿರುವುದೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಮಾನಂತವಾಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page