ಗ್ರೇಡ್ ಎಸ್‌ಐ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಆಲಪ್ಪುಳ: ಚೆರಿಯ ಕಲವೂರು ಎಂಬಲ್ಲಿ ಪೊಲೀಸ್ ಅಧಿಕಾರಿ ಹೋಮ್‌ಸ್ಟೇಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳಮಶ್ಶೇರಿ ಠಾಣೆಯ ಗ್ರೇಡ್ ಎಸ್‌ಐ ಅಜಯ್ ಸರಸ (55) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದವರು. ಗುರುವಾರ ಮಧ್ಯಾಹ್ನ ಅಜಯ್ ಕಲವೂರಿನ ಹೋಮ್‌ಸ್ಟೇಯಲ್ಲಿ ಕೊಠಡಿ ಪಡೆದಿದ್ದರು. ನಿನ್ನೆ ಬೆಳಿಗ್ಗೆ ಕೊಠಡಿ ಖಾಲಿ ಮಾಡಬೇಕಾದ ಸಮಯವಾದರೂ ಅಜಯ್‌ರನ್ನು ಕಾಣದ ಹಿನ್ನೆಲೆಯಲ್ಲಿ ನೌಕರರು ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬ ಸಮಸ್ಯೆ ಆತ್ಮಹತ್ಯೆಗೆ ಕಾರಣವೆಂದು ಪೊಲೀಸರು ಸೂಚಿಸುತ್ತಿದ್ದಾರೆ.