ಘರ್ಷಣೆ: ಇಬ್ಬರಿಗೆ ಇರಿತ; ಕೊಲೆಯತ್ನ ಸೇರಿದಂತೆ ಎರಡು ಪ್ರಕರಣ ದಾಖಲು

ಮುಳ್ಳೇರಿಯ: ಮದ್ಯದ ಹೆಸರಲ್ಲಿ ಇಬ್ಬರ ಮಧ್ಯೆ ಪರಸ್ಪರ ಜಗಳವುಂಟಾಗಿ ಅವರಿಬ್ಬರೂ ಚೂರಿ ಇರಿತಕ್ಕೊಳಗಾದ ಘಟನೆ ನಡೆದಿದೆ. ಅಡೂರು ಉರ್ಡೂರು ಎಣೆಪರಂಬ ನಿವಾಸಿ ಗಿರೀಶ್ (೩೬) ಮತ್ತು ಅಡೂರು ವೆಳ್ಳಚ್ಚೇರಿ ನಿವಾಸಿ  ಚಾಣ (೪೦) ಎಂಬವರು ಘರ್ಷಣೆಯಲ್ಲಿ ಇರಿತಕ್ಕೊಳಗಾಗಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಬಗ್ಗೆ ಗಿರೀಶ್ ನೀಡಿದ ದೂರಿನಂತೆ ಚಾಣನ ವಿರುದ್ಧ ಆದೂರು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅ. ೭ರಂದು ಸಂಜೆ  ಅಡೂರು ವೆಳ್ಳಚ್ಚೇರಿಯ ಅಂಗಡಿಯೊಂದರ ಎದುರುಗಡೆಯ ಹಿತ್ತಿಲಲ್ಲಿ ನಾನು ಹುಲ್ಲು  ಹೆರೆಯುತ್ತಿದ್ದ ವೇಳೆ ಹಿಂದಿನಿಂದ ಬಂದ   ಚಾಣ ಚಾಕುವಿನಿಂದ ತಲೆ, ಕುತ್ತಿಗೆ ಮತ್ತು ಕಾಲಿಗೆ ಇರಿದು ಕೊಲೆಗೈಯ್ಯಲೆತ್ನಿಸಿ ದನೆಂದೂ ಅದಕ್ಕೆ ಕಾರಣವೇನೆಂದು ತನಗೆ ತಿಳಿಯದೆಂದು ಪೊಲೀಸರು ನೀಡಿದ ಹೇಳಿಕೆಯಲ್ಲಿ ಗಾಯಾಳು ಗಿರೀಶ್ ಆರೋಪಿಸಿದ್ದಾರೆ.

ಅ. ೭ರಂದು ಸಂಜೆ ಅಡೂರು ಬೆಳ್ಳಚ್ಚೇರಿಯಲ್ಲಿ ಗಿರೀಶ್ ತನ್ನಲ್ಲಿ ಕುಡಿಯಲು ಮದ್ಯ ಕೇಳಿದ್ದನೆಂದೂ ಅದನ್ನು ನೀಡಲು ನಾನು ತಯಾರಾಗದೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ  ಗಿರೀಶ್ ತನ್ನನ್ನು ತಡೆದು ನಿಲ್ಲಿಸಿ ಚಾಕುವಿನಿಂದ ತಲೆಗೆ ಹಿಂದುಗಡೆ ಮತ್ತು ಕೈಗಳಿಗೆ ಇರಿದು ಗಾಯಗೊಳಿಸಿದನೆಂದು ಆರೋಪಿಸಿ ಇನ್ನೊಂದೆಡೆ ಚಾಣ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಆ ದೂರಿನಂತೆ ಆದೂರು ಪೊಲೀಸರು ಗಿರೀಶ್‌ನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page