ಘರ್ಷಣೆ: ಇಬ್ಬರು ಸಿಪಿಎಂ ಕಾರ್ಯಕರ್ತರಿಗೆ ಇರಿತ

ಕಣ್ಣೂರು: ಕೊಡಿಯೇರಿಯಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಿಪಿಎಂ ಕಾರ್ಯ ಕರ್ತರು ಗಾಯಗೊಂಡಿದ್ದಾರೆ. ಪಾರಾಲ್ ಚೀರಣಿಕಂಡಿ ನಿವಾಸಿ ಸುಬಿನ್ (28), ತೋಟ್ಟೋಳಿಯ ಸುಜಾನೇಶ್ (29) ಎಂಬಿವರು ಇರಿತದಿಂದ ಗಾಯಗೊಂಡಿದ್ದು, ಇವರನ್ನು ತಲಶ್ಶೇರಿ  ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಇರಿದಿರುವುದಾಗಿ ಸಿಪಿಎಂ ಆರೋಪಿಸಿದೆ. ಪಾರಾಲ್ ಎಂಬಲ್ಲಿ ಲೋಕಸಭಾ ಚುನಾವಣೆ ಯಲ್ಲಿ ಗೆಲುವಿಗೆ ಹರ್ಷ ಸೂಚಿಸಿ ಬಿಜೆಪಿ ಮೆರವಣಿಗೆ ನಡೆಸುತ್ತಿದ್ದಾಗ ಘರ್ಷಣೆ  ನಡೆದು ಇಬ್ಬರು ಸಿಪಿಎಂ  ಕಾರ್ಯಕರ್ತರಿಗೆ ಗಾಯಗಳಾಗಿತ್ತು. ಇದರ ಮುಂದುವರಿಕೆಯಾಗಿ ಬಿಜೆಪಿ ಕಾರ್ಯಕರ್ತನ ಮನೆಗೆ ಬಾಂಬೆಸೆತ  ಉಂಟಾಗಿತ್ತು. ಇದೀಗ ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು,  ಭೀತಿ ಸೃಷ್ಟಿಯಾಗಿದೆ.

You cannot copy contents of this page