ಚಕ್ರವರ್ತಿ ಹೊಸಂಗಡಿ ವಾರ್ಷಿಕೋತ್ಸವ

ಹೊಸಂಗಡಿ: ಚಕ್ರವರ್ತಿ ಹೊಸಂಗಡಿ ಇದರ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರತಿಷ್ಠಾ ದಿನಾಚರಣೆ ಇತ್ತೀಚೆಗೆ ಜರಗಿತು.ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಭಜನೆ, ತುಪ್ಪಾಭಿಷೇಕ ಹಾಗೂ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಕ್ಲಬ್‌ನ ವಾರ್ಷಿಕೋತ್ಸವ, ಕುಣಿತ ಭಜನೆ, ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಸಭಾ ಕಾರ್ಯಕ್ರಮ, ನಾಟಕ ಪ್ರದರ್ಶನಗೊಂಡಿತು. ಸಭೆಯಲ್ಲಿ  ಕ್ಲಬ್‌ನ ಅಧ್ಯಕ್ಷ ಶಿವಪ್ರಸಾದ್ ಪೆಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪುರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್‌ರಾಜ್ ಮುಖ್ಯ ಅತಿಥಿಗಳಾಗಿದ್ದರು. ಹರೀಶ್ ಕ್ಲಬ್‌ನ ಗೌರವಾಧ್ಯಕ್ಷ ಅನಿಲ್ ರಾಜ್ ಅಂಗಡಿಪದವು, ಮಹಿಳಾ ಸಮಿತಿಯ ಅಧ್ಯಕ್ಷೆ ರಜನಿ ಶ್ರೀಧರ್ ಉಪಸ್ಥಿತರಿದ್ದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ದಿನಕರ್ ಬಿ.ಎಂ. ನಿರೂಪಿಸಿದರು.

You cannot copy contents of this page