ಚಪ್ಪಲಿ ರಿಪೇರಿ ಅಂಗಡಿಯೊಳಗೆ ವ್ಯಕ್ತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಮಂಜೇಶ್ವರ: ಸಂಬಂಧಿಕನ ಚಪ್ಪಲಿ ರಿಪೇರಿ ಅಂಗಡಿಯೊಳಗೆ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಗುಡ್ಡೆ ರೋಡ್ ಮಲ್ಲುಗುರಿ ನಿವಾಸ್‌ನ ಬಾಬು ಬಿ.ಎಂ (71) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಕರ್ನಾಟಕದಲ್ಲಿ ಸರಕಾರಿ ಉದ್ಯೋಗಿಯಾಗಿದ್ದ ಇವರು ನಿವೃತ್ತಿಯ ಬಳಿಕ ಮಂಜೇಶ್ವರ ಭಾಗದಲ್ಲಿರುವ ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ಹೊಸಂಗಡಿ ಗೇಟ್ ಸಮೀಪ ಚಪ್ಪಲಿ ದುರಸ್ತಿ ನಡೆಸುವ ಸಂಬಂಧಿಕರಾದ ಬಾಬು ಎಂಬವರು ಅಂಗಡಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದಾಗ ಅಲ್ಲಿಗೆ ತಲುಪಿದ ಬಾಬು ಬಿ.ಎಂ ಈ ಅಂಗಡಿಯೊಳಗೆ ನಿದ್ರಿಸುವುದಾಗಿ ತಿಳಿಸಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಅಂಗಡಿ ತೆರೆಯಲು ಬಾಬು ತಲುಪಿದಾಗ ಬಾಬು ಬಿ.ಎಂ ಅದರೊಳಗೆ ನಿದ್ರಿಸಿದ್ದ್ದರೆನ್ನಲಾಗಿದೆ. ಅವರನ್ನು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಮಂಜೇ ಶ್ವರ ಪೊಲೀಸರು ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದಾರೆ. ದಿವಂಗತರಾದ ಮಾಲಿಂಗ-ಆಮುನಿ ದಂಪತಿಯ ಪುತ್ರನಾದ ಬಾಬು ಬಿ.ಎಂ ಅವಿವಾಹಿ ತನಾಗಿದ್ದು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.