ಚರ್ಲಡ್ಕದಲ್ಲಿ ಹೋಟೆಲ್‌ಗೆ ಆಕ್ರಮಣ: ಆರೋಪಿ ಬಂಧನ
ಬದಿಯಡ್ಕ: ಚರ್ಲಡ್ಕದಲ್ಲಿ ಹೋಟೆ ಲ್‌ಗೆ ಅತಿ ಕ್ರಮಿಸಿ ನುಗ್ಗಿ ಮಾಲಕ ಹಾಗೂ ನೌಕರರ ಮೇಲೆ ಹಲ್ಲೆಗೈದು, ಹೋಟೆಲ್‌ನ ಗಾಜು ಪುಡಿಗೈದು ೫೦,೦೦೦ ರೂಪಾಯಿಗಳ ನಾಶನಷ್ಟ ಸೃಷ್ಟಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ನೆಲ್ಲಿಕಟ್ಟೆ ಬಳಿಯ ಚರ್ಲಡ್ಕದ ಸೈರಾಸ್ (೩೨) ಎಂಬಾತನನ್ನು ಬದಿಯಡ್ಕ ಎಸ್.ಐ ಪಿ.ಕೆ. ವಿನೋದ್ ಕುಮಾರ್ ಇಂದು ಮುಂಜಾನೆ ಬಂಧಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಈತ ಮನೆಗೆ ತಲುಪಿದ್ದಾನೆಂಬ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮನೆಗೆ ತಲುಪಿ ಬಂಧಿಸಿದೆ. ಕಳೆದ ತಿಂಗಳ ೨೫ರಂದು ರಾತ್ರಿ ೧೧.೩೦ರ ವೇಳೆ ಹೋಟೆಲ್‌ಗೆ ಆಕ್ರಮಣ ನಡೆಸಿದ ಘಟನೆ ನಡೆದಿದೆ.
ಅನ್ವರ್ ಸಾದತ್ ಎಂಬವರ ಮಾಲಕತ್ವದಲ್ಲಿ ಚರ್ಲಡ್ಕದಲ್ಲಿ ಕಾರ್ಯಾಚರಿಸುವ ರೋಯಲ್ ಫ್ಯಾಮಿಲಿ ರೆಸ್ಟೋರೆಂಟ್ ಮೇಲೆ ಆಕ್ರಮಿಸಲಾಗಿದೆ. ರಾತ್ರಿ ೧೧.೩೦ಕ್ಕೆ ಹೋಟೆಲ್‌ಗೆ ತಲುಪಿದ ಸೈರಾಸ್ ಮರದ ಕುರ್ಚಿಯ ಕಾಲನ್ನು ಮುರಿದು ತೆಗೆದು ಗಾಜುಗಳನ್ನು ಹೊಡೆದು ಪುಡಿಗೈದಿದ್ದಾನೆ.
ಆಕ್ರಮಣ ತಡೆಯಲು ಯತ್ನಿಸಿದ ಕೆಲಸಗಾರ ರಾದ ಸೈಜು, ಸುಬಿನ್, ಬಿಜೋಯ್, ನಸೀರ್ ಎಂಬಿವರನ್ನು ಅಸಭ್ಯವಾಗಿ ನಿಂದಿಸಿ ಅವರ ಮೇಲೆ ಹಲ್ಲೆಗೈದಿದ್ದು, ಅಲ್ಲದೆ ಹೋಟೆಲ್ ಮಾಲಕ ಅನ್ವರ್ ಸಾದತ್‌ರಿಗೆ ಕುರ್ಚಿಯ ಕಾಲಿನಿಂದ ಹೊಡೆದು ಗಂಭೀರ ಗಾಯ ಗೊಳಿಸಿರುವುದಾಗಿ ದೂರಲಾಗಿತ್ತು. ಘಟನೆ ಬಳಿಕ ಆರೋಪಿ ತಲೆಮರೆಸಿ ಕೊಂಡಿದ್ದನು. ಬಂಧಿತ ಈತನನ್ನು ಇಂದು ನ್ಯಾ ಯಾಲಯಕ್ಕೆ ಹಾಜರುಪಡಿಸಲಾಗುವುದು.