ಚಳಿಗಾಲ ಅಧಿವೇಶನ: ಸಂವಿಧಾನ ಮೇಲಿನ ಚರ್ಚೆ ಡಿ. 10,13,14ರಂದು

 ನವದೆಹಲಿ:  ಆದಾನಿ ಹಗರಣ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿಗೊಳಗಾಗಿದ್ದ ಸಂಸತ್‌ನ ಚಳಿಗಾಲ ಅಧಿವೇಶನದ ಕಲಾಪಗಳು ಇಂದಿನಿಂದ ಸುಗಮ ವಾಗಿ ಆರಂಭಗೊಂಡಿದೆ.  ಸಂಸತ್‌ನ ಕಲಾಪ ಗಳನ್ನು ಶಾಂತಿಯುತವಾಗಿ ನಡೆಸಲು ಲೋಕಸಭಾ ಅಧ್ಯಕ್ಷರ ಸಾನಿಧ್ಯದಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಡಿಸೆಂಬರ್ 13 ಮತ್ತು 14ರಂದು ಲೋಕಸಭೆಯಲ್ಲಿ ಮತ್ತು  16 ಮತ್ತು 17ರಂದು  ರಾಜ್ಯಸಭೆಯಲ್ಲಿ ಸಂವಿಧಾನ ಮೇಲಿನ ಚರ್ಚೆಗೆ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳು ಒಪ್ಪಿಕೊಂಡಿವೆ. ಸಂವಿಧಾನ ಸ್ವೀಕರಿಸಿ 75 ವರ್ಷ ಆದ ನಿಮಿತ್ತ ಈ ಚರ್ಚೆಗೆ ಸಮ್ಮತಿ ಸೂಚಿಸಲಾಗಿದೆ. ಇದರ ಹೊರತಾಗಿ ಜಿಎಸ್‌ಟಿ ದರವನ್ನು ಏರಿಸುವ ಸಾಧ್ಯತೆಯೂ ಜಿಎಸ್‌ಟಿ ದರ ನಿಗದಿಪಡಿಸುವ ಕುರಿತಾದ ಸಚಿವರ ಸಮೂಹವು ತಂಪು ಪಾನೀಯಗಳು, ಸಿಗರೇಟ್, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಈಗಿನ ಶೇ. ೨೮ರಿಂದ ೩೫ಕ್ಕೇರಿಸಲು ಶಿಫಾರಸ್ಸು ಮಾಡಿದೆ.  ಇದಕ್ಕೆ ಲೋಕಸಭೆ ಅನುಮೋದನೆ ನೀಡುವ ಸಾಧ್ಯತೆಯೂ ಇದೆ. ಸಂಸತ್‌ನ ಕಲಾಪಕ್ಕೆ ಅಡ್ಡಿಪಡಿಸುವುದು ಒಳ್ಳೆಯದಲ್ಲ. ಸಂಸತ್ತಿನ ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯಲು ವಿಪಕ್ಷಗಳು ಸಹಕರಿಸಬೇಕೆಂದು ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜೂಜಿ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಆದಾನಿ ವಿಷಯವನ್ನು ಪ್ರತ್ಯೇಕವಾಗಿ ಚರ್ಚಿಸುವ ಬದಲು ಇತರ ಚರ್ಚೆಗಳ ವೇಳೆ ಪ್ರಸ್ತಾಪಿಸಲು ಕಾಂಗ್ರೆಸ್ ಕೂಡಾ ಒಪ್ಪಿಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page