ಚಿಕಿತ್ಸೆಗಾಗಿ ತಲುಪಿದ ಯುವತಿಗೆ ಕಿರುಕುಳ: ವೈದ್ಯನಿಂದ ನಿರೀಕ್ಷಣಾ ಜಾಮೀನು ಅರ್ಜಿ; ಪೊಲೀಸರಿಂದ ವರದಿ ಕೇಳಿದ ನ್ಯಾಯಾಲಯ
ಕಾಸರಗೋಡು: ಕಿಡ್ನಿ ಸಂಬಂಧ ರೋಗಕ್ಕೆ ಚಿಕಿತ್ಸೆಗಾಗಿ ತಲುಪಿದ ಯುವತಿಗೆ ಕಿರುಕುಳ ನೀಡಲಾಯಿ ತೆಂಬ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರಿಂದ ವರದಿ ಕೇಳಿದೆ.
ಆರೋಪಿಯಾದ ವೈದ್ಯ ನಿರೀಕ್ಷಣಾ ಜಾಮೀನು ಅರ್ಜಿಯೊಂ ದಿಗೆ ನ್ಯಾಯಾಲ ಯವನ್ನು ಸಮೀಪಿ ಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಅಂಬಲತ್ತರ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಇರಿಯ ಎಂಬಲ್ಲಿ ಕ್ಲಿನಿಕ್ ನಡೆಸುವ ಡಾ| ಜೋಸ್ ಎಸ್ ಡೋನ್ ಆರೋಪಿ ಯೆನ್ನಲಾಗಿದೆ. ಚಿಕಿತ್ಸೆಗಾಗಿ ತಲುಪಿದ ಇಬ್ಬರು ಮಕ್ಕಳ ತಾಯಿಯಾದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವು ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ಅಂಬಲತ್ತರ ಪೊಲೀ ಸರು ಕೇಸು ದಾಖಲಿ ಸಿಕೊಂಡಿದ್ದರು.
ಇದೇ ವೇಳೆ ವೈದ್ಯ ತಲೆಮರೆಸಿಕೊಂಡಿದ್ದನು. ವೈದ್ಯನನ್ನು ಹುಡುಕಿ ಪೊಲೀಸರು ಇರಿಯಾದ ಕ್ಲಿನಿಕ್ ಹಾಗೂ ಕಾಞಂಗಾಡ್‌ನ ವಾಸಸ್ಥಳದಲ್ಲಿ ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ವೈದ್ಯ ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ ಹೈಕೋರ್ಟ್‌ಗೆ ಸಮೀಪಿಸಿದ್ದನ.