ಚಿಕಿತ್ಸೆಯಲ್ಲಿದ್ದ ನಿವೃತ್ತ ಎಸ್ ಐ ಟಿ. ವೇಣುಗೋಪಾಲನ್ ನಿಧನ
ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನಿವೃತ್ತ ಎಸ್‌ಐ ಕಯ್ಯೂರು ನಿವಾಸಿ ಟಿ. ವೇಣುಗೋಪಾಲನ್ (60) ನಿಧನ ಹೊಂದಿದರು. ಮೂತ್ರಕೋಶ ಸಂಬಂಧ ಚಿಕಿತ್ಸೆಯಲ್ಲಿದ್ದರು. ಬ್ಲಡ್ ಡೋನರ್ಸ್ ಕೇರಳ ಸಮಿತಿಯ ಮಾಜಿ ಗೌರವಾಧ್ಯಕ್ಷರಾಗಿಯೂ, ಕಾಸರಗೋಡು ಜಿಲ್ಲಾ ಗೌರವಾ ಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತದೇಹವನ್ನು ಇಂದು ಬೆಳಿಗ್ಗೆ ಮನೆ ಪರಿಸರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಅಪ ರಾಹ್ನ ಅಂತ್ಯಕ್ರಿಯೆ ನಡೆಯಲಿದೆ.
ಮೃತರು ಪತ್ನಿ ಟಿ.ವಿ. ಸುನಿತ, ಮಕ್ಕಳಾದ ಅಶೀಬೂಶ್, ಅನಯ್, ಅಳಿಯ ಸುನು, ಸಹೋದರಿಯ ರಾದ ಕನಕಲತ, ಶೈಲಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.