ಚಿನ್ನದ ದರ ಇನ್ನಷ್ಟು ಮೇಲಕ್ಕೆ
ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಇನ್ನಷ್ಟು ಹೆಚ್ಚಿದೆ. ಈ ಮೊದಲೇ ದಾಖಲೆ ಸೃಷ್ಟಿಸಿದ್ದ ದರ ಇದೀಗ ಮತ್ತೆ ಮತ್ತೆ ಮೇಲಕ್ಕೇರು ತ್ತಿದೆ. ಇಂದು ಒಂದು ಗ್ರಾಮ್ ಚಿನ್ನ 100 ರೂ.ಗಳ ಹೆಚ್ಚಳವಾಗಿದ್ದು, ಇದರಿಂದ ಒಂದು ಪವನ್ ಚಿನ್ನಕ್ಕೆ49440 ರೂ.ಗೇರಿದೆ. ನಿನ್ನೆ ಒಂದು ಪವನ್ ಚಿನ್ನದ ದರ ೪೮,೬೪೦ ರೂ. ಆಗಿತ್ತು. ಇದೇ ರೀತಿ ದರ ಏರಿಕೆಯಾದರೆ ಶೀಘ್ರವೇ 50,000 ರೂ.ಗೆ ತಲುಪಲಿದೆಯೆಂಬ ಆತಂಕವೂ ಹುಟ್ಟಿಕೊಂಡಿದೆ.