ಚಿನ್ನವೆಂದು ನಂಬಿಸಿ ಲೋಹದ ಗಟ್ಟಿ ನೀಡಿ ವ್ಯಾಪಾರಿಗೆ ವಂಚನೆ: ಅಸ್ಸಾಂ ನಿವಾಸಿಗಳಾದ ಇಬ್ಬರು ಸೆರೆ
ಕಲ್ಲಿಕೋಟೆ: ನಕಲಿ ಚಿನ್ನದ ಗಟ್ಟಿ ಯನ್ನು ನೀಡಿ ಚಿನ್ನ ವ್ಯಾಪಾರಿಯನ್ನು ವಂಚಿಸಿದ ಅಸ್ಸಾಂ ನಿವಾಸಿಗಳಿಬ್ಬರು ಕಲ್ಲಿಕೋಟೆಯಲ್ಲಿ ಸೆರೆಯಾಗಿದ್ದಾರೆ. ಇಜಾಜುಲ್ ಇಸ್ಲಾಂ, ರೈಸುದ್ದೀನ್ ಎಂಬಿ ವರನ್ನು ನಡಕ್ಕಾವ್ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ತಂಡದ ಇನ್ನೋರ್ವ ಸೆರೆಗೀಡಾಗಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ ನಿವಾಸಿಯಾದ ವ್ಯಾಪಾರಿಯನ್ನು ತಂಡ ಕಬಳಿಸಿದೆ. ಕೊಂಡೋಟಿಯಲ್ಲಿ ವ್ಯಾಪಾರಿಯಾಗಿ ರುವ ವ್ಯಕ್ತಿಯಿಂದ 6 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಇವರು ಸೆರೆಯಾಗಿರುವುದು. 12 ಲಕ್ಷ ರೂ.ವನ್ನು ಚಿನ್ನದ ಗಟ್ಟಿಗೆ ನಿಗದಿಪಡಿಸಲಾಗಿತ್ತು. ಮೊದಲ ಹಂತದಲ್ಲಿ 6 ಲಕ್ಷ ರೂ. ಸ್ವೀಕರಿಸಿದ ಬಳಿಕ ಆರೋಪಿಗಳು ತಲೆಮರೆಸಿ ಕೊಂಡಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. 2024 ಜನವರಿ 18ರಂದು ಘಟನೆ ನಡೆದಿತ್ತು. ಚಿನ್ನದ ಗಟ್ಟಿ ಎಂಬ ಹೆಸರಲ್ಲಿ ಅರ್ಧ ಕಿಲೋಗ್ರಾಂನಷ್ಟು ತೂಕದ ಲೋಹವನ್ನು ತೋರಿಸಿ ತಂಡ ವಂಚನೆ ನಡೆಸಿತ್ತು.
6 ಲಕ್ಷ ರೂ. ಪಡೆದು ತಂಡ ಪರಾರಿಯಾದ ಬಳಿಕ ಚಿನ್ನದ ಗಟ್ಟಿಯನ್ನು ಪರಿಶೀಲಿಸಿದಾಗ ಅದು ಲೋಹದ ಗಟ್ಟಿ ಎಂದು ತಿಳಿದು ಬಂದಿದ್ದು, ವಂಚನೆಗೊಳಗಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಮೊಬೈಲ್ ಫೋನ್, ಟವರ್ ಲೊಕೇಶನ್‌ಗಳ ಆಧಾರದಲ್ಲಿ ಹುಡುಕಾಟ ನಡೆಸಲಾಗುತ್ತಿತ್ತು. ಆದರೆ ಫೋನ್ ಹಾಗೂ ಸಿಮ್ ಕಾರ್ಡ್‌ಗಳನ್ನು ಅಪರಾಧಿಗಳು ಆಗಾಗ ಬದಲಿಸುತ್ತಿದ್ದರು. ಇದೇ ತಂಡ ಇನ್ನೊಂದು ವಂಚನೆಗಾಗಿ ತೃಶೂರ್‌ಗೆ ತಲುಪಿದಾಗ ನಡಕ್ಕಾವ್ ಪೊಲೀಸರು ಇವರನ್ನು ಸೆರೆ ಹಿಡಿದಿದ್ದಾರೆ.