ಚಿನ್ನ ಕಳ್ಳ ಸಾಗಾಟ: ಇಬ್ಬರು ಯುವಕರನ್ನು ಕೊಲೆಗೈದು ಮೃತದೇಹಗಳನ್ನು ಹೂತುಹಾಕಿದ ಪ್ರಕರಣ:  ಚೆಂಗಳ, ಅಣಂಗೂರು ನಿವಾಸಿಗಳಾದ ಮೂವರು ಆರೋಪಿಗಳು ತಪ್ಪಿತಸ್ಥರು

ಕಾಸರಗೋಡು/ಮಂಗಳೂರು: ಕಳ್ಳಸಾಗಾಟ ಚಿನ್ನವನ್ನು ಅಪಹರಿಸಿದು ದಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಇಬ್ಬರು ಯುವಕರನ್ನು  ಕುತ್ತಿಗೆ ಕೊಯ್ದು ಕೊಲೆಗೈದ ಬಳಿಕ ಮೃತದೇಹಗಳನ್ನು ಡಸ್ಟರ್ ಕಾರಿನ ಢಿಕ್ಕಿಯಲ್ಲಿ ತುಂಬಿಸಿ  ಕೊಂಡೊಯ್ದು ಕುಂಡಂಕುಳಿ, ಮರುದಡ್ಕ ಎಂಬಲ್ಲಿನ  ನಿರ್ಜನಪ್ರದೇಶದಲ್ಲಿ ಹೂತುಹಾಕಿದ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಪತ್ತೆಹಚ್ಚಿದೆ.

ಚೆಂಗಳದ ಮುಹಮ್ಮದ್ ಮುಹಾ ಜೀರ್ ಸನಾಫ್ (25), ಅಣಂಗೂರು ನಿವಾಸಿಗಳಾದ ಮೊಹಮ್ಮದ್ ಇರ್ಷಾದ್ (24), ಮುಹಮ್ಮದ್ ಸಫ್ವಾನ್ (24) ಎಂಬಿವರನ್ನು ಮಂಗಳೂರು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಪ್ಪಿತಸ್ಥರೆಂದು  ಘೋಷಿಸಿದೆ.

2014 ಜುಲೈ 1ರಂದು ಹಾಡಹಗಲೇ ಕಾಸರಗೋಡನ್ನು ಬೆಚ್ಚಿ ಬೀಳಿಸಿದ ಅವಳಿ ಕೊಲೆ ಕೃತ್ಯ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಾವರದಲ್ಲಿ ನಡೆದಿತ್ತು.  ಕಣ್ಣೂರು, ತಲಶ್ಶೇರಿಯ ನಾಫಿರ್ (24), ಕಲ್ಲಿಕೋಟೆಯ ಫಾಹಿಮ್ (25) ಎಂಬಿವರು ಕೊಲೆಗೈಯ್ಯಲ್ಪಟ್ಟವರಾಗಿದ್ದಾರೆ. ಅತ್ತಾವರದ ಬಾಡಿಗೆ ಮನೆಯಲ್ಲಿ ಇಬ್ಬರನ್ನು ಕುತ್ತಿಗೆ ಕೊಯ್ದ ಬಳಿಕ ಮೃತದೇಹಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಡಸ್ಟರ್ ಕಾರಿನಲ್ಲಿ ತುಂಬಿಸಿ ಕಾಸರಗೋಡಿಗೆ ತರಲಾಗಿತ್ತು. ಪ್ರಯಾಣ ಮಧ್ಯೆ ಕೊಲೆ ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳು ಹಾಗೂ ರಕ್ತ ಬೆರೆತ ಬಟ್ಟೆಬರೆಗಳನ್ನು ಚಂದ್ರಗಿರಿ ಹೊಳೆ ಸಹಿತ ವಿವಿಧೆಡೆ ಉಪೇಕ್ಷಿಸಲಾಗಿತ್ತು.  ರಾತ್ರಿಹೊತ್ತಿನಲ್ಲಿ ಕುಂಡಂಗುಳಿ, ಮರುದಡ್ಕಕ್ಕೆ ತಲುಪಿದ ತಂಡ ಮೊದಲೇ ಖರೀದಿಸಿದ 10 ಸೆಂಟ್ಸ್ ಸ್ಥಳದಲ್ಲಿ ಮುಂಚಿತವಾಗಿ ತೋಡಿದ್ದ ಹೊಂಡದಲ್ಲಿ ತುಂಬಿಸಿ ಮುಚ್ಚಿದ ಬಳಿಕ ತೆಂಗಿನ ಗಿಡವನ್ನು ನೆಡಲಾಗಿತ್ತು. ಮಂಗಳೂರು  ಸಿಟಿ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಅವಳಿ ಕೊಲೆ ಪ್ರಕರಣದ ಮಾಹಿತಿಗಳು ಬೆಳಕಿಗೆ ಬಂದಿದೆ. ಅತ್ತಾವರದಲ್ಲಿ 38 ಸಾವಿರ ರೂ. ತಿಂಗಳ ಬಾಡಿಗೆಗೆ ತೆಗೆದ ಮನೆಯಲ್ಲಿ ನಾಫಿರ್ ಹಾಗೂ ಫಾಹಿಂ ಕೊಲೆಗೀಡಾಗಿರುವುದಾಗಿ ಪೊಲೀಸರು ದೃಢೀಕರಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ  ಮನೆಗೆ ಕಾವಲುಗಾರರು ಇರುವುದರಿಂದ ಹಗಲು ಹೊತ್ತಿನಲ್ಲಿ ಅವಳಿ ಕೊಲೆ ನಡೆಸಲಾಗಿದೆ. ಕಾವಲುಗಾರ ತಲುಪುವ ಮುಂಚೆಯೇ ಮೃತದೇಹಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕಾರಿನ ಢಿಕ್ಕಿಯಲ್ಲಿ ಇರಿಸಲಾಗಿತ್ತು. ನಾಫಿರ್ ಹಾಗೂ ಜತೆಗಿದ್ದವರು ನಾಪತ್ತೆಯಾದ ಬಗ್ಗೆ ಕ್ರೈಂಬ್ರಾಂಚ್ ಇಂಟೆಲಿಜೆನ್ಸ್ ಪತ್ತೆಹಚ್ಚಿ ನಡೆಸಿದ ತನಿಖೆಯಲ್ಲಿ ಅವಳಿ ಕೊಲೆ ಪ್ರಕರಣದ ಪೂರ್ಣ ಮಾಹಿತಿಗಳು ತಿಳಿದುಬಂದಿದೆ.  ಆರೋಪಿಗಳನ್ನು ಸೆರೆಹಿಡಿದ ಪೊಲೀಸ್ ತಂಡ ನಡೆಸಿದ ಸಮಗ್ರ ತನಿಖೆಯಲ್ಲಿ ಮೃತದೇಹಗಳನ್ನು ಕುಂಡಂಕುಳಿ ಹಾಗೂ ಮರುದಡ್ಕದಲ್ಲಿ ಹೂತು ಹಾಕಿರುವುದಾಗಿ ತಿಳಿದುಬಂ ದಿದೆ. ಕಾಸರಗೋಡು ಪೊಲೀಸರ ಸಹಾ ಯದೊಂದಿಗೆ ನಡೆಸಿದ ತನಿಖೆಯಲ್ಲಿ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಯಿತು. ಕಳ್ಳ ಸಾಗಾಟ ಚಿನ್ನ ನಷ್ಟಗೊಂಡಿರುವುದೇ ಅವಳಿ ಕೊಲೆಗೆ ಕಾರಣವಾಗಿದೆ. 2013 ನವಂ ಬರ್ ತಿಂಗಳಲ್ಲಿ ನಾಫಿರ್‌ರ ಕೈಯಲ್ಲಿ 4 ಕಿಲೋ ಚಿನ್ನವನ್ನು ತಂಡವೊಂದು ಗಲ್ಫ್‌ನಿಂದ ಕೊಟ್ಟು ಕಳುಹಿಸಿತ್ತು. ಮಂಗ ಳೂರಿನ ಒಬ್ಬರಿಗೆ ಹಸ್ತಾಂತರಿಸಬೇಕೆಂದು ತಿಳಿಸಲಾಗಿತ್ತು. ಆದರೆ ಆ ಚಿನ್ನವನ್ನು ಹಸ್ತಾಂತರಿಸಿಲ್ಲ.  ಚಿನ್ನದೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ನಾಫಿರ್ ಸುರಕ್ಷಿತವಾಗಿ  ಹೊರ ಹೋಗಿರುವುದಾಗಿಯೂ ಇದರಿಂದ ತಾವು ವಂಚಿತರಾದೆವೆಂದು ಕಳ್ಳಸಾಗಾಟ ತಂಡ ತಿಳಿದುಕೊಂಡಿದೆ. ಇದರ ಮುಂ ದುವರಿಕೆಯಾಗಿ ನಾಫಿರ್ ಹಾಗೂ ಫಾಹಿಮ್‌ರನ್ನು ಕೊಲೆಗೈಯ್ಯಲಾಗಿದೆ.

You cannot copy contents of this page