ಚಿನ್ನ ಗಗನದತ್ತ: ಪವನ್ನಲ್ಲಿ 840 ರೂ. ಹೆಚ್ಚಳವಾಗಿ 71360ಕ್ಕೆ ನೆಗೆತ
ತಿರುವನಂತಪುರ: ಯುಎಸ್ ಚೈನ ವ್ಯಾಪಾರ ಬಿಕ್ಕಟ್ಟು ತೀವ್ರ ಗೊಂಡ ಹಿನ್ನೆಲೆಯಲ್ಲಿ ಚಿನ್ನದ ದರ ಬಾನೆತ್ತರಕ್ಕೆ ಏರುತ್ತಿದೆ. ರಾಜ್ಯದಲ್ಲಿ ಇಂದು ಪವನ್ಗೆ 840 ರೂ. ಹೆಚ್ಚಳವಾಗಿ 71360 ರೂ.ಗೆ ತಲುಪಿದೆ. ನಿನ್ನೆ 70520 ರೂ. ಆಗಿತ್ತು ಒಂದು ಪವನ್ ಚಿನ್ನದ ಬೆಲೆ. ಗ್ರಾಂಗೆ 8815 ರೂ. ಆಗಿದ್ದ ಬೆಲೆ ಇಂದು 8920ಕ್ಕೆ ತಲುಪಿದೆ. ಗ್ರಾಂ ನಲ್ಲಿ 105 ರೂ. ಹೆಚ್ಚಳಗೊಂಡಿದೆ. ಒಂದು ವಾರದ ಮಧ್ಯೆ 2860 ರೂ. ಒಂದು ಪವನ್ನಲ್ಲಿ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಟ್ರೋಯ್ ಔನ್ಸ್ಗೆ ಇತಿಹಾ ಸದಲ್ಲೇ ಪ್ರಥಮವಾಗಿ 3342 ಡಾಲರ್ಗೆ ತಲುಪಿದೆ. ದೇಶದ ಕಮೋಡಿಟ್ ಮಾರುಕಟ್ಟೆಯಾದ ಎಂ.ಸಿ.ಎಕ್ಸ್ನಲ್ಲಿ 10 ಗ್ರಾಂನ ಚಿನ್ನದ ಬೆಲೆ 95,840ಕ್ಕೇರಿದೆ. ವಿವಿಧ ದೇಶಗಳ ಕೇಂದ್ರ ಬ್ಯಾಂಕ್ಗಳು ಹೆಚ್ಚೆಚ್ಚು ಕಿನ್ನವನ್ನು ಖರೀದಿಸುತ್ತಿರುವುದು ಹಾಗೂ ಡಾಲರ್ ದುರ್ಬಲಗೊಳ್ಳುತ್ತಿರುವುದು ಚಿನ್ನದ ಬೆಲೆಯೇರಿಕೆಗೆ ಕಾರಣವೆನ್ನಲಾಗಿದೆ.