ಚಿಪ್ಪಾರು ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ವರ್ಷ ಕಳೆದರೂ ದುರಸ್ತಿಗೆ ಕ್ರಮವಿಲ್ಲ: ಅವ್ಯವಸ್ಥೆಯಿಂದ ಕೂಡಿದ ಬಾಡಿಗೆ ಮನೆಯಲ್ಲಿ ತಾತ್ಕಾಲಿಕ ಅಂಗನವಾಡಿ ಆರಂಭ
ಪೈವಳಿಕೆ: ಪೈವಳಿಕೆ ಪಂಚಾಯತ್ನ 19ನೇ ವಾರ್ಡ್ ಚಿಪ್ಪಾರುನಲ್ಲಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ವರ್ಷ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂಗನವಾಡಿಯನ್ನು ಮುಚ್ಚಲಾಗಿದೆ. ಆದರೆ ಅವ್ಯವಸ್ಥೆಯಿಂದ ದೂಡಿದ ಅಮ್ಮೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಆದರೆ ಇಲ್ಲಿಗೆ ದಾರಿ ಸೌಕರ್ಯ ಇಲ್ಲದಿರುವುದರಿಂದ ಮಕ್ಕಳು ತಲುಪುತ್ತಿಲ್ಲವೆಂದು ಊರವರು ತಿಳಿಸಿದ್ದಾರೆ. ಶೋಚನೀಯ ಅಂಗನವಾಡಿಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಈ ಹಿಂದೆ ಅಧಿಕಾ ರಿಗಳು ಅಂಗನವಾಡಿಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ತೆರಳಿದ್ದರು. ಆದರೆ ಇದುವರೆಗೂ ದುರಸ್ತಿಗೆ ಅಥವಾ ಹೊಸ ಅಂಗನವಾಡಿ ನಿರ್ಮಾಣದ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂಬುದಾಗಿ ಊರವರು ತಿಸಿದ್ದಾರೆ. ಈ ಅಂಗನವಾಡಿಯಲ್ಲಿ ನೀರಿನ ವ್ಯವಸ್ಥೆ ಗಾಗಿ ಸರಕಾರ ಕೊಳವೆ ಬಾವಿಯನ್ನು ನಿರ್ಮಿಸಿದ್ದರೂ ಆ ನೀರನ್ನು ಕುಡಿಯಲು ಯೋಗ್ಯವಾಗಿ ಲ್ಲವೆನ್ನಲಾಗಿದೆ. ಪರಿಸರದಿಂದ ನೀರನ್ನು ತಂದು ಉಪಯೋಗಿಸುತ್ತಿ ದ್ದಾರೆ. ಈ ಅಂಗನವಾಡಿಗೆ ದಿ| ಅಹಮ್ಮದ್ ಹಾಜಿ ಖಂಡಿಗೆ ಸ್ಥಳ ದಾನ ಮಾಡಿದ್ದು, 1999ರಲ್ಲಿ ದಿ| ಐತ್ತಪ್ಪ ಶೆಟ್ಟಿಗಾರ್ ಚಿಪ್ಪಾರ್ ಅಂಗನವಾಡಿ ಕಟ್ಟಡವನ್ನು ಉದಾರವಾಗಿ ನಿರ್ಮಿಸಿದ್ದರು. ಬಳಿಕ ಸರಕಾರಕ್ಕೆ ಹಸ್ತಾಂತರಿಸಿರು ವುದಾಗಿ ಊರವರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಹೊಸ ಅಂಗನವಾಡಿ ಅಥವಾ ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.