ಚೀನಾದಲ್ಲಿ ಕೋವಿಡ್ ರೀತಿಯ ಇನ್ನೊಂದು ಮಾರಕ ರೋಗ ಎಚ್‌ಎಂಪಿವಿ ಹರಡುತ್ತಿರುವ ಆತಂಕ

ಬೀಜಿಂಗ್:  ಚೀನಾದಲ್ಲಿ ಇನ್ನೊಂದು ಮಾರಕ ರೋಗವಾದ ಎಚ್‌ಎಂಪಿವಿ (ಹ್ಯೂಮನ್ ಮೆಟಾಪ್ ನ್ಯೂಮೋ ವೈರಸ್) ರೋಗಾಣುವಿನ ನೆಗೆಟಿವ್ ಸೆನ್ಸ್ ಸಿಂಗಲ್ ಸ್ಟಾಂಡೆಡ್ ಆರ್‌ಎನ್‌ಎ ವೈರಸ್ ಪತ್ತೆಯಾಗಿರು ವುದು. ಇದು ಚೈನಾದಲ್ಲಿ ಆತಂಕ  ಉಂಟುಮಾಡಿಲ ವೆಂಬ ಸೂಚನೆ ಯಿದ್ದರೂ ಈ ರೋಗದ ಬಗ್ಗೆ ವಿಶ್ವದಲ್ಲಿ ಆತಂಕ ಮೂಡಿಬರುತ್ತಿದೆ.

ಕೋವಿಡ್-೧೯ ಎಂಬ ಸಾಂಕ್ರಾ ಮಿಕ ರೋಗದ ಬಳಿಕ ಎಚ್‌ಎಂಪಿವಿ ಚೈನಾದಲ್ಲಿ ವ್ಯಾಪಕವಾಗುತ್ತಿದೆ ಎಂದು ವರದಿ ಬಂದಿದೆ. ಚೈನಾದ ಆಸ್ಪತ್ರೆಗಳಲ್ಲಿ ಈ ರೋಗ ತಗಲಿದವರು ತುಂಬಿ ಕೊಂಡಿರುವುದಾಗಿ ವರದಿಗಳಲ್ಲಿ ತಿಳಿದು ಬರುತ್ತಿದೆ. ರೋಗ ಬಾಧಿಸಿ  ಮೃತಪಟ್ಟ ವರನ್ನು ಸಂಸ್ಕರಿಸಲು ಕೂಡಾ ಸಾಧ್ಯವಿಲ್ಲದೆ ಜನರು ಸಂಕಷ್ಟಪಡುತ್ತಿ ದ್ದಾರೆ. ಇನ್‌ಫ್ಲೂವೆನ್ಸ್-ಎ, ಕೋವಿಡ್-೧೯, ಎಚ್‌ಎಂಪಿವಿ ಎಂಬಿವು ಚೈನಾದಲ್ಲಿ ಹರಡುತ್ತಲಿದೆ. ಹೀಗಿದ್ದರೂ ಚೈನಾದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ.  ಶ್ವಾಸೋಚ್ವಾಸ ಮಾಡುವಾಗ  ವಾಯು ತಲುಪುವ ಶ್ವಾಸಕೋಶಕ್ಕೆ ಈ ರೋಗ ತಗಲುತ್ತದೆ. ಬಳಿಕ ಶ್ವಾಸಕೋಶ ರೋಗಗಳಿಗೆ ಇದು ಕಾರಣವಾಗುತ್ತದೆ.  ಶೀತಕಾಲ ಹಾಗೂ ವಸಂತ ಕಾಲದಲ್ಲಿ ಈ ರೋಗ ಹೆಚ್ಚಾಗಿ ಹರಡುತ್ತದೆ. 2001ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಪ್ರಥಮವಾಗಿ ಈ ರೋಗವನ್ನು ಪತ್ತೆಹಚ್ಚಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page