ಚುನಾವಣೆ: ಬೆವರಿಳಿಸಲಿದೆ ಬಿಸಿಲ ಝಳ
ಕಾಸರಗೋಡು: ಬೇಸಿಗೆ ಕಾಲದ ಬಿಸಿಲ ಝಳ ದಿನೇ ದಿನೇ ಹೆಚ್ಚಾಗುತ್ತಿರುವ ವೇಳೆಯಲ್ಲೇ ಕೇರಳದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅದು ಚುನಾವಣಾ ಪ್ರಚಾರವನ್ನು ಬೆವರಿಸಲಿದೆಯೆಂ ಬುವುದರಲ್ಲಿ ಸಂದೇಶವೇ ಇಲ್ಲ.
ತಾಪಮಾನ ಹೆಚಚಾಗುತ್ತಿರುವ ಉಮೇದ್ವಾರರು ಮತ್ತು ಅವರ ರಾಜಕೀಯ ಪಕ್ಷದವರು, ಕಾರ್ಯಕರ್ತರಿಗೆ ಒಂದು ಅತೀ ದೊಡ್ಡ ಸವಾಲಾಗಿ ತಲೆಯೆತ್ತುವಂತೆ ಮಾಡಿದೆ. ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿರ್ಮಾಣ ಕೆಲಸಗಳು ಅತ್ಯಂತ ಭರದಿಂದ ಸಾಗುತ್ತಿದ್ದು, ಅದರಿಂದಾಗಿ ಇಲ್ಲಿ ಪ್ರಚಾರ ನಡೆಸಲು ಅಗತ್ಯದ ಸ್ಥಳ ಸೌಕರ್ಯ ಲಭಿಸದ ಸ್ಥಿತಿಯೂ ಇದೆ. ತಾಳಿಪಡ್ಪು ಮೈದಾನ ಮತ್ತು ವಿದ್ಯಾನಗರ ನಗರಸಭಾ ಕ್ರೀಡಾಂಗಣವನ್ನು ಮಾತ್ರವೇ ಪ್ರಚಾರ ಸಮಾವೇಶ ಮತ್ತು ರ‍್ಯಾಲಿಗಳಿಗೆ ಅವಲಂಬಿಸಬೇಕಾಗಿ ಬಂದಿದೆ. ಕಾಸರಗೋಡು ನಗರದಲ್ಲಿ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಕಡಿಮೆಯಾಗಿದೆ. ಮಂಜೇಶ್ವರ ಮತ್ತು ಹೊಸದುರ್ಗ ಮತ್ತಿತರೆಡೆಗಳಲ್ಲಿ ಈಗ ಹೆಚ್ಚಿನ ಮಟ್ಟದ ಚುನಾವಣಾ ಪ್ರಚಾರ ಸಭೆಗಳನ್ನು ಈಗ ಹಮ್ಮಿಕೊಳ್ಳಲಾಗುತ್ತಿದೆ.