ಚುನಾವಣೋತ್ತರ ಸಮೀಕ್ಷೆಗಳಿಗೆ ಚುನಾವಣಾ ಆಯೋಗ ನಿಷೇಧ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯ ವಿಧಾನ ಸಭೆಗಳಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿ ಚುನಾವಣೋತ್ತರ ಸಮೀ ಕ್ಷೆಗಳನ್ನು ನಡೆಸುವುದು, ಪ್ರಕಟಿಸುವುದು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. 

ಈ ನಿಷೇಧ ಎಪ್ರಿಲ್ ೧೯ರಂದು ಬೆಳಿಗ್ಗೆ ೭ರಿಂದ ಪ್ರಾರಂಭವಾಗಿ ಜೂನ್ ೧ರಂದು ಸಂಜೆ ೬.೩೦ಕ್ಕೆ ಕೊನೆಗೊಳ್ಳ ಲಿದೆ.  ಈ ನಿರ್ಬಂಧವು ಮುದ್ರಣ, ವಿದ್ಯುನ್ಮಾನ ಅಥವಾ ಇತರ ಯಾವುದೇ ಪ್ರಸರಣ ವಿಧಾನ ಸೇರಿದಂತೆ ಎಲ್ಲಾ ರೀತಿಯ ಮಾಧಮಗಳಿಗೆ ಸಮಾನವಾಗಿ ಅನ್ವಯಗೊಳಿಸಲಾಗಿದೆ ಮಾತ್ರವಲ್ಲ ಅಭಿಪ್ರಾಯ ಸಮೀಕ್ಷೆಗಳಿಗೂ ಈ ನಿಷೇದ ಹೇರಲಾಗಿದೆ. ಚುನಾವ ಣೋತ್ತರ ಸಮೀಕ್ಷೆಗಳು, ಅಭಿಪ್ರಾಯ ಸಮೀಕ್ಷೆಗಳು ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯ ಲ್ಲಿ ಚುನಾವಣಾ ಆಯೋಗ ಈ ತೀರ್ಮಾನ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page