ಚೆಂಗಳ ಪಂಚಾಯತ್ 9ನೇ ವಾರ್ಡ್‌ನಲ್ಲಿ ರಸ್ತೆ ಅತಿಕ್ರಮಣ: ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಾಗರಿಕರ ರೋಷ
ಕಾಸರಗೋಡು: ಚೆಂಗಳ ಪಂಚಾ ಯತ್ 9ನೇ ವಾರ್ಡ್ ಕೋಲಾಚಿ ಯಡ್ಕ ಎಂಬಲ್ಲಿ ಪಂಚಾಯತ್ ರಸ್ತೆಯನ್ನು ವ್ಯಕ್ತಿಯೋರ್ವ ಅತಿಕ್ರಮಿಸಿ ಸ್ವಂತವಾಗಿಸಿಕೊಂಡಿರುವುದಾಗಿ ದೂರಲಾಗಿದೆ. ಇದರಿಂದಾಗಿ 35 ಕುಟುಂಬಗಳು ಸಮಸ್ಯೆಗೀಡಾಗಿ ರುವುದಾಗಿ ಹೇಳಲಾಗುತ್ತಿದೆ. ರಸ್ತೆಯನ್ನು ಅತಿಕ್ರಮಿಸಿ ಎರಡು ವಾರಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸುತ್ತಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ಚೆಂಗಳ ಪಂಚಾಯತ್‌ನ ಆಸ್ತಿ ರಿಜಿಸ್ಟರ್‌ನಲ್ಲಿ ಒಳಗೊಂಡ ಕೋಲಾಚಿಯಡ್ಕ ಅಂಗನವಾಡಿ ರಸ್ತೆಯ 50 ಮೀಟರ್ ನಷ್ಟು ಸ್ಥಳವನ್ನು ಅತಿಕ್ರಮಿಸಿಕೊಂ ಡಿರುವುದಾಗಿಯೂ ಇದರಿಂದ ಆ ರಸ್ತೆಯಲ್ಲಿ ಜನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದಾಗಿ ಹೇಳಲಾಗು ತ್ತಿದೆ. ಪಂಚಾಯತ್ ಆಸ್ತಿಯಲ್ಲಿ ಒಳ ಗೊಂಡ ಸ್ಥಳವನ್ನು ಭದ್ರವಾಗಿರಿಸಲು ಪಂಚಾಯತ್ ಅಧಿಕಾರಿಗಳು ಹಿಂಜರಿಯುವುದು ಯಾಕೆಂದು ನಾಗರಿಕರು ಪ್ರಶ್ನಿಸಿದ್ದಾರೆ. ಅಲ್ಲದೆ ರಸ್ತೆಯನ್ನು ಅತಿಕ್ರಮಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಿಲುವನ್ನು ನಾಗರಿಕರು ಟೀಕಿಸುತ್ತಿದ್ದಾರೆ.