ಚೆರ್ಕಳದಲ್ಲಿ ಪಾರ್ಕಿಂಗ್ ವಿಷಯದಲ್ಲಿ ಘರ್ಷಣೆ: ಎರಡು ಕೇಸು ದಾಖಲು: 25 ಮಂದಿ ಆರೋಪಿಗಳು; ನಾಲ್ಕು ಮಂದಿ ಸೆರೆ
ಚೆರ್ಕಳ: ಕಾರು ಪಾರ್ಕಿಂಗ್ ವಿಷಯದಲ್ಲಿ ಮೊನ್ನೆ ಸಂಜೆ ಚೆರ್ಕಳ ಪೇಟೆಯಲ್ಲಿ ಉಂಟಾದ ಘರ್ಷಣೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಎರಡು ಕೇಸು ದಾಖಲಿಸಿಕೊಂ ಡಿದ್ದಾರೆ. ಇದರಲ್ಲಿ ಒಟ್ಟು ೨೫ ಮಂದಿ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲಿಸಲಾಗಿದೆ. ಆ ಪೈಕಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೆರ್ಕಳದ ಎಬಿಸಿಡಿ ಮೊಬಿ ಸ್ಟ್ರೀಟ್ ಎಂಬ ಹೆಸರಿನ ಮೊಬೈಲ್ ಫೋನ್ ಅಂಗಡಿಗೆ ಹಾನಿಗೊಳಸಿ ಆ ಅಂಗಡಿ ನೌಕರ ಅಸೈನಾರ್ ಎಂಬವರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ನೆಲ್ಲಿಕಟ್ಟೆ ಮುಬಾರಕ್ ಹೌಸ್‌ನ ಎನ್. ನೌಫಲ್ (29), ಆತನ ಸಹೋದರ ಅರ್ತಾಫ್ (23), ಚೆಂಗಳದ ತನ್ವೀರ್ (19) ಮತ್ತು ಪ್ರಾಯಪೂರ್ತಿಯಾಗದ ಓರ್ವ ಸೇರದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ನೌಫಲ್‌ನ ತಂದೆ ಸಿ.ಎಚ್. ಇಬ್ರಾಹಿಂನ ವಿರು ದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದೆಡೆ ಚೆರ್ಕಳದಲ್ಲಿ ತಮ್ಮ ಕಾರನ್ನು ತಡೆದು ನಿಲ್ಲಿಸಿ ಅದನ್ನು ಹೊಡೆದು ಹಾನಿಗೊಳಿಸಿದ ವತಿಯಿಂ ದ ಒಂದೂವರೆ ಲಕ್ಷ ರೂ.ಗಳ ನಷ್ಟ ಉಂಟಾಗಿದೆಯೆಂದು ಮತ್ತು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೆಲ್ಲಿಕಟ್ಟೆ ಮಲಬಾರ್ ಹೌಸ್‌ನ ನೌಫಲ್ (30) ನೀಡಿದ ದೂರನಂತೆ ಶೆರೀಫ್ ಸೇರಿದಂತೆ ಏಳು ಮಂದಿ ವಿರುದ್ಧ ವಿದ್ಯಾನಗರ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.