ಚೆರ್ಕಳದಲ್ಲಿ ಮುದ್ರಿಸಿದ ಖೋಟಾನೋಟುಗಳನ್ನು ರಿಸರ್ವ್ ಬ್ಯಾಂಕ್‌ಗೆ ಕಳುಹಿಸಿದ ಪೊಲೀಸರು

ಚೆರ್ಕಳ: ಚೆರ್ಕಳದ ಪ್ರಿಂಟಿಂಗ್ ಪ್ರೆಸ್‌ನಿಂದ ಮುದ್ರಿಸಿದ ಖೋಟಾನೋಟುಗಳು ಮೈಸೂರಿನ ಆರ್‌ಬಿಐ ಕಚೇರಿಗೆ ಇಂದು ಕಳುಹಿಸಿಕೊಡಲಾಗುವುದು. ನೋಟುಗಳ ನಿರ್ಮಾಣದ ಬಗ್ಗೆ ಹೆಚ್ಚು ಸ್ಪಷ್ಟತೆ ಹೊಂದಲು ನೋಟುಗಳನ್ನು ಕಳುಹಿಸಿಕೊಡಲಾಗುವುದೆಂದು ಮಂಗಳೂರು ಸೈಬರ್ ಇಕಾನಾಮಿಕ್ ಆಂಡ್ ನಾರ್ಕೋಟಿಕ್ಸ್ ಕ್ರೈಮ್ ಪೊಲೀಸ್ ಎಸ್‌ಐ ಕೃಷ್ಣ ಬಾಯಾರ್ ತಿಳಿಸಿದರು.

ಮಂಗಳೂರಿನಿಂದ ಸೆರೆಯಾದ ಕಾಸರಗೋಡು ನಿವಾಸಿಗಳು ಸೇರಿದ ಖೋಟಾನೋಟು ತಂಡ ನೋಟು ನಿರ್ಮಾಣದ ಬಗ್ಗೆ ಕಲಿತಿರುವುದು ಇಂಟರ್‌ನೆಟ್ ನೋಡಿ ಆಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ. 70 ಜಿಎಸ್‌ಎಂ ಎನ್‌ಎಸ್ ಬುಕ್ ಪ್ರಿಂಟಿಂಗ್ ಪೇಪರ್‌ಗಳನ್ನು  ಆರೋಪಿಗಳು ಕರೆನ್ಸಿ ನಿರ್ಮಾಣಕ್ಕಾಗಿ ಉಪಯೋಗಿಸಿದ್ದಾರೆ. ಇದು ಕಲ್ಲಿಕೋಟೆಯಿಂದ ತರಿಸಲಾಗಿದೆ. ಪೇಪರ್‌ಗೆ ಸೇರಿಸುವ ಹಸಿರು ಬಣ್ಣದ ಫಾಯಿಲ್ ಪೇಪರ್‌ಗಳನ್ನು ದೆಹಲಿಯಿಂದ ಆನ್‌ಲೈನ್ ಮೂಲಕ ತರಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆರೆಯಾದ ನಾಲ್ಕು ಆರೋಪಿಗಳು ಕೂಡಾ ಸ್ಥಳ ವ್ಯಾಪಾರ ವ್ಯವಹಾರ ಮಾಡುವವರಾಗಿದ್ದಾರೆಂದು ಪೊಲೀಸರು ತಿಳಿಸಿದ್ದು, ಇವರ ಈ ಸಂಪರ್ಕವೇ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುವ ಕೊಳತ್ತೂರು ಕರಿಚ್ಚೇರಿ ಪೇರಳಂ ನಿವಾಸಿ ವಿ. ಪ್ರಿಯೇಶ್‌ನ ನೇತೃತ್ವದಲ್ಲಿ ಖೋಟಾನೋಟು ನಿರ್ಮಾಣಕ್ಕೆ ನಾಂದಿ ಹಾಡಿರುವುದು.

ಮಂಗಳೂರಿನ ಸಾಯಿ ಟೌನ್‌ಗೇಟ್ ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡ ಆರೋಪಿಗಳು ಮಂಗಳೂರಿನಲ್ಲಿ ಖೋಟಾನೋಟುಗಳನ್ನು ಪರೀಕ್ಷಾರ್ಥ ವಿತರಿಸುವ ಯೋಜನೆ ಹಾಕಿಕೊಂಡಿದ್ದರು. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇವರನ್ನು ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದರು.

You cannot copy contents of this page