ಚೆರ್ಕಳದಲ್ಲಿ ಯುವಕನಿಗೆ ಇರಿತ: ಮೂವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಚೆರ್ಕಳದಲ್ಲಿ ನಿನ್ನೆ ರಾತ್ರಿ ಸುಮಾರು ೯ಗಂಟೆಯ ವೇಳೆ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಇರಿತಕ್ಕೊಳಗಾ ಗಿದ್ದಾನೆ.

ಚೆಂಗಳ ಕೋಳಿಕಟ್ಟ ಹೌಸ್‌ನ  ಅಬೂಬಕರ್ ಎಂಬವರ ಪುತ್ರ ಮೊಹಮ್ಮದ್ ನವಾಜ್ (32) ಇರಿತಕ್ಕೊಳಗಾಗಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅವರು ನೀಡಿದ ಹೇಳಿಕೆ ಪ್ರಕಾರ ಇರ್ಶಾದ್ ಸೇರಿದಂತೆ ಮೂವರ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿ ಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೂರ್ವದ್ವೇಷವೇ ಇರಿತಕ್ಕೆ ಕಾರಣವೆನ್ನಲಾಗಿದೆ.

You cannot copy contents of this page