ಚೆರ್ಕಳ ಬಳಿ ಚಿರತೆಕಾಟ
ಚೆರ್ಕಳ: ಚೆರ್ಕಳ ವಿಕೆಪಾರ ದಲ್ಲಿ ನಿನ್ನೆ ರಾತ್ರಿ ಚಿರತೆಯ ಸಾದೃಶ್ಯ ಹೊಂದಿದ ಪ್ರಾಣಿಯೊಂದು ಆ ದಾರಿಯಾಗಿ ಸಂಚರಿಸುವುದನ್ನು ಸ್ಥಳೀಯರು ಕಂಡಿದ್ದಾರೆ. ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಅರಣ್ಯಪಾಲಕರು ಸ್ಥಳಕ್ಕಾಗಮಿಸಿ ಶೋಧ ಆರಂಭಿಸಿ ದ್ದಾರೆ. ಆ ಪರಿಸರದ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸತೊಡಗಿದ್ದಾರೆ. ನಿನ್ನೆ ರಾತ್ರಿ ಗೋಚರಿಸಿದ್ದು ಚಿರತೆಯಾಗಿದೆಯೇ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ಶೋಧ ಇನ್ನೂ ಮುಂದುವರಿಯುತ್ತಿದೆಯೆಂದು ಅರಣ್ಯಪಾಲಕರು ತಿಳಿಸಿದ್ದಾರೆ.