ಚೇಡಿಕ್ಕಾನ ನಿವಾಸಿ ಯುವತಿ ನಾಪತ್ತೆ

ಬದಿಯಡ್ಕ: ಬಸ್‌ನಲ್ಲಿ ತೆರಳಿದ ಯುವತಿ ಹಿಂತಿರುಗಿಲ್ಲ ಎಂಬ ದೂರಿನಲ್ಲಿ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ದ್ದಾರೆ. ಈ ಬಗ್ಗೆ ತನಿಖೆ ಆರಂಭಿ ಸಲಾಗಿದೆ. ನೆಕ್ರಾಜೆ ಚೇಡಿಕ್ಕಾನ ಹೌಸ್‌ನ ಮಂಜುಳ (34 ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ನಿನ್ನೆ ಅಪರಾಹ್ನ 2.30ಕ್ಕೆ ನೆಕ್ರಾಜೆಯಿಂದ ಬಸ್‌ನಲ್ಲಿ ತೆರಳಿರುವುದಾಗಿ ತಿಳಿದು ಬಂದಿದ್ದು, ಆದರೆ ಆ ಬಳಿಕ ಹಿಂತಿ ರುಗಿಲ್ಲವೆಂದು ಸಹೋದರಿಯ ಪತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page