ಚೇರಂಗೈ ಸಮುದ್ರ ಕಿನಾರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಹೊಯ್ಗೆ ತುಂಬಿಸಿದ ಗೋಣಿ ಗೋಡೆ ನಿರ್ಮಿಸಿ ತಾತ್ಕಾಲಿಕ ಪರಿಹಾರ

ಕಾಸರಗೋಡು: ನಗರದ ಚೇರಂಗೈ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಅದನ್ನು ತಡೆಗಟ್ಟಲು ಗೋಣಿ ಚೀಲಗಳಲ್ಲಿ  ಹೊಯ್ಗೆ ತುಂಬಿಸಿದ  ಗೋಡೆ ನಿರ್ಮಿಸಿ ಈಗ ತಾತ್ಕಾಲಿಕ ಪರಿಹಾರ ಕಂಡುಕೊ ಳ್ಳಲಾಗಿದೆ.  ಈ ಪ್ರದೇಶದಲ್ಲಿ ಕಡಲ್ಕೊರೆತ ಪ್ರತೀ ಮಳೆಗಾಲದ ವೇಳೆ ಉಂಟಾಗುತ್ತಿದೆ.  ಇದರಿಂದಾಗಿ ಅಲ್ಲಿನ ಸುತ್ತಮುತ್ತಲ ಹಲವು ಮನೆಗಳಿಗೆ ಬೆದರಿಕೆ ಎದುರಾಗಿದೆ. ಈ ಹಿಂದಿನ ವರ್ಷಗಳಲ್ಲಿ ಹಲವು ಮನೆಗಳು ಹಾನಿಗೊಂಡಿದ್ದವು. ಇದಕ್ಕೆ ಈತನಕ ಶಾಶ್ವತ ಪರಿಹಾರ ಕಂಡುಕೊಳ್ಳ ಲಾಗಿಲ್ಲ. ಕಾಸರಗೋಡು ಲೈಟ್ ಹೌಸ್‌ನ ಬಳಿಯಲ್ಲಿ ಇಂತಹ ಬೆದರಿಕೆ ಉಂಟಾಗಿದ್ದು, ಅದನ್ನು ತಡೆಗಟ್ಟಲು ಸಮುದ್ರ ಕಿನಾರೆಯಲ್ಲಿ ಕಗ್ಗಲ್ಲು ಉಪಯೋಗಿಸಿ ನಿರ್ಮಿಸಲಾಗಿದ್ದ ಗೋಡೆ ಈಗ ಸಮುದ್ರ ಪಾಲಾಗಿದೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ  ಉಂಟಾಗಬೇಕಾಗಿದೆಯೆಂದು ಈ ಪ್ರದೇಶದ ಜನರು ಆಗ್ರಹಿಸುತ್ತಿದ್ದಾರೆ.

RELATED NEWS

You cannot copy contents of this page