ಮೊಗ್ರಾಲ್ ಪುತ್ತೂರು: ಚೌಕಿ ಜಂ ಕ್ಷನ್‌ನಲ್ಲಿ ಆಟೋ ರಿಕ್ಷಾಗಳ ನಿಲುಗಡೆಗೆ ಸ್ಥಳವಿಲ್ಲದಾಗಿದ್ದು ಇದರಿಂದ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಸುಮಾರು ೮೦ರಷ್ಟು ಆಟೋ ಚಾಲಕರು ಚೌಕಿ ಜಂಕ್ಷನ್‌ನಲ್ಲಿ ಆಟೋ ಚಲಾಯಿಸಿ ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭ ಗೊಂಡ ಬಳಿಕ ಇಲ್ಲಿ ಆಟೋ ರಿಕ್ಷಾಗಳ ನಿಲುಗಡೆಗೆ ಸೌಕರ್ಯವಿಲ್ಲದಾಗಿದೆ. ಇದರಿಂದ ಸ್ಥಳಾವಕಾಶವೊದಗಿಸಿಕೊಡ ಬೇಕೆಂದು ವಿನಂತಿಸಿ ಈ ಹಿಂದೆ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆಯಾದರೂ ಸೂಕ್ತ ಕ್ರಮ ಉಂಟಾಗಿಲ್ಲ. ಇದರಿಂದ ಇದೀಗ ರಸ್ತೆಯ ಒಂದು ಭಾಗದಲ್ಲಿ ಆಟೋ ರಿಕ್ಷಾಗಳನ್ನು ನಿಲುಗಡೆಗೊಳಿಸಲಾ ಗುತ್ತಿದೆ. ಆದರೆ ಅಲ್ಲಿ ಸಿಪಿಸಿಆರ್‌ಐ ಕ್ಯಾಂಪಸ್, ಕೇಂದ್ರೀಯ ವಿದ್ಯಾಲಯ ಗಳಿದ್ದು ಇದರಿಂದ ಶಾಲಾ ಬಸ್‌ಗಳ ಸಹಿತ ಹಲವು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿರುವು ದರಿಂದ ಸಾರಿಗೆ ಅಡಚಣೆ ಸೃಷ್ಟಿಯಾಗುತ್ತಿದೆ. ಆದ್ದರಿಂದ ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೂ ಅಪಾಯ ಭೀತಿ ಎದುರಾಗುತ್ತಿದೆ. ಆದ್ದರಿಂದ ಆಟೋ ರಿಕ್ಷಾಗಳ ನಿಲುಗಡೆಗೆ ಸೂಕ್ತ ಸೌಕರ್ಯ ಏರ್ಪಡಿಸಿಕೊಳ್ಳುವಲ್ಲಿ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ವಿನಂತಿಸಿ ಪಂಚಾಯತ್ ಅಧ್ಯಕ್ಷ, ಜಿಲ್ಲಾಧಿಕಾರಿ, ಆರ್‌ಟಿಒ, ಡಿವೈಎಸ್ಪಿ, ಸರ್ಕಲ್ ಇನ್‌ಸ್ಪೆಕ್ಟರ್, ಶಾಸಕರು ಮೊದಲಾದವರಿಗೆ ಆಟೋ ಚಾಲಕರು ಮನವಿ ಸಲ್ಲಿಸಿದ್ದಾರೆ.