ಛತ್ತೀಸ್‌ಘಡದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಟ್ಟು ಕೊಲೆ

ರಾಯ್‌ಪುರ್: ಛತ್ತೀಸ್‌ಘಡದಲ್ಲಿ ಬಿಜೆಪಿ ಮುಖಂಡನನ್ನು ಗುಂಡು ಹಾರಿಸಿ ಕೊಲೆಗೈಯ್ಯಲಾಗಿದೆ. ಬಿಜೆಪಿ ಕಂಗೇರ್ ಜಿಲ್ಲಾ ಉಪಾಧ್ಯಕ್ಷ ಅಸಿಂರಾಯ್ (೫೦)ರನ್ನು ಕೊಲೆಗೈಯ್ಯಲಾಗಿದೆ. ನಿನ್ನೆ ರಾತ್ರಿ ೮.೩೦ರ ವೇಳೆ ಪಕಂಜೂರ್ ನಗರದ ಕಂಗೇರ್‌ನಲ್ಲಿ ಬೈಕ್‌ನಲ್ಲಿ ಪ್ರಯಾ ಣಿಸುತ್ತಿದ್ದ ಮಧ್ಯೆ ಆಕ್ರಮಣವುಂಟಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಗೂಂಡಾ ತಂಡಗಳ ಮಧ್ಯೆ ಇರುವ ವೈಷಮ್ಯ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಕೂಡಾ ಇದೇ ರೀತಿಯ ಆಕ್ರಮಣಗಳನ್ನು ನಡೆಸಲಾಗಿತ್ತು. ಕಳೆದ ವರ್ಷ ಛತ್ತೀಸ್‌ಘಡದ ಗಲಭೆಪೀಡಿತ ಪ್ರದೇಶವಾದ ನಾರಾಯಣ್‌ಪುರ್ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಮಧ್ಯೆ ಬಿಜೆಪಿ ಮುಖಂಡ ರತನ್‌ದುಬೆಯನ್ನು ಮಾವೋವಾದಿಗಳು ಕೊಲೆಗೈದಿದ್ದರು. ಈ ಮೊದಲು ಮೊಹ್ಲಾ ಮಾನ್‌ಪೂರ್ ಅಂಬಾಗಡ್ ಚೌಕಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಬಿರ್ಜು ತರಾಂ ಕೂಡಾ ಅಪರಿಚಿತರ ಗುಂಡಿಗೆ ಬಲಿಯಾಗಿದ್ದರು.

You cannot copy contents of this page