ಛತ್ತೀಸ್‌ಘಡ್‌ನಲ್ಲಿ ಕ್ರೈಸ್ತ ಭಗಿನಿಯರ ಬಂಧನ: ಕಾಂಗ್ರೆಸ್‌ನಿಂದ ಪ್ರತಿಭಟನೆ
ವರ್ಕಾಡಿ: ಹಳ್ಳಿಗಾಡಿನ ಆದಿವಾಸಿ ಗಳ ಸೇವೆ ಮಾಡುತ್ತಿದ್ದ ಇಬ್ಬರು ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂ ಧಿಸಿ ಛತ್ತೀಸ್‌ಘಡ್ ಸರಕಾರ ಜೈಲಿ ಗಟ್ಟಿದ್ದು ಅದರ ಕೆಟ್ಟ ಫಲಗಳನ್ನು ಅನುಭವಿಸಲಿದೆ ಎಂದು ಕಾಸರ ಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದ್ದಾರೆ. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿ ಯಿಂದ ಮಜಿರ್ಪಳ್ಳದಲ್ಲಿ ಹಮ್ಮಿಕೊಂ ಡಿದ್ದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಶಾಹುಲ್ ಹಮೀದ್ ಪೆರ್ಲ, ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹರ್ಷಾದ್ ವರ್ಕಾಡಿ, ಮನ್ಸೂರ್ ಬಿ.ಎಂ, ಖಲೀಲ್ ಬಜಾಲ್, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿ’ಸೋಜಾ, ಇಕ್ಬಾಲ್ ಕಳಿಯೂರು, ಪುರುಷೋತ್ತಮ ಅರಿಬೈಲ್, ಹನೀಫ್ ಪಡಿಂಞÁರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ಕಮಲಾಕ್ಷಿ, ಶಾಂತಾ ಆರ್ ನಾಯ್ಕ್, ಗೀತಾ ಬಂದ್ಯೋಡು, ಮಮತಾ ದಿವಾಕರ್, ಸೀತಾ ಡಿ, ಐರಿನ್, ಜಮೀಲಾ, ರೇಶ್ಮಾ ಟಿ.ವಿ, ಅಜೀಜ್ ಕಲ್ಲೂರು, ಸತ್ಯನ್ ಉಪ್ಪಳ, ಹಮೀದ್ ಕಣಿಯೂರು, ಎಲಿಯಾಸ್ ಡಿ’ಸೋಜಾ, ಗಂಗಾಧರ ಕೆಎಸ್, ಸದಾಶಿವ ಕೆ,ಬಾಸಿತ್ ತಲೆಕ್ಕಿ, ಶೀನ ಕೆದುಂಬಾಡಿ, ರಂಜಿತ್ ಮಂಜೇಶ್ವರ, ಎ.ಎಂ ಉಮ್ಮರ್ ಕುಂಞ, ಎಸ್.ಅಬ್ದುಲ್ ಖಾದರ್ ಹಾಜಿ, ವಿನೋದ್ ಪಾವೂರು, ಅಲಿ ಧರ್ಮನಗರ, ಕಮಲಾಕ್ಷ ಧರ್ಮನಗರ, ವಿಕ್ಟರ್ ಡಿ’ಸೋಜಾ, ಬಾಲಕೃಷ್ಣ, ವಸಂತರಾಜ್ ಶೆಟ್ಟಿ, ಸದಾಶಿವ ಪಜ್ವ, ಸತೀಶ್ ಅರಿಬೈಲ್, ಉಮ್ಮರ್ ಬೆಜ್ಜ, ಗೋಪಾಲ ಲೆಂಕ್ರಿಕಾಡು, ಮೂಸಾ ಡಿಕೆ, ಯಾಕೂಬ್ ಕೋಡಿ, ಮಾಲಿಂಗ ಮಂಜೇಶ್ವರ, ಅಶ್ರಫ್ ಆನೆಕಲ್ಲು, ಅಶ್ರಫ್ ಕೆ.ಕೆ, ಅಬೂಸಾಲಿ ಮುರತ್ತಣೆ, ಮುಸ್ತಫಾ ಟಿ.ಎ, ಸಲಾಂ ಮಾಂಕೋಡಿ, ಶಮೀರ್ ಮಾಂಕೋಡಿ, ಅಬೂಬಕ್ಕರ್ ಡಿ, ಅಬೂಬಕ್ಕರ್ ಉರ್ಣಿ, ಉಮ್ಮರ್ ಪಾಲೆಂಗ್ರಿ, ಅಬ್ದುಲ್ಲ ಹಾಜಿ ಕೆದಕ್ಕಾರ್, ಇಬ್ರಾಹಿಂ ಹಾಜಿ ಸುಳ್ಯಮೆ, ಚಂದ್ರಶೇಖರ ಅರಿಬೈಲ್, ಅಬೂಬಕ್ಕರ್ ಮಣಿಪ ರಂಬ, ಸಮದ್ ಕೆದಕ್ಕಾರ್, ಮೊಯ್ದಿನ್ ಹಾಜಿ ಬಳಪ್ಪು, ಶರೀಫ್ ಪಾಲೆಂಗ್ರಿ, ಟಿ.ಎಂ ಮೊಯ್ದಿನ್, ಕೆಎಚ್ ಅಬೂಬಕ್ಕರ್, ಮುಸ್ತಫಾ ವೇದೋಡಿ, ಇಬ್ರಾಹಿಂ ಧರ್ಮನಗರ ಮುಂತಾದವರು ಉಪಸ್ಥಿತರಿದ್ದರು. ದಿವಾಕರ ಎಸ್ ಜೆ ಸ್ವಾಗತಿಸಿ, ಮುಹಮ್ಮದ್ ಸೀಗಂಡಡಿ ವಂದಿಸಿದರು.
ಕುಂಬಳೆ: ಕುಂಬಳೆ ಪೇಟೆಯಲ್ಲಿ ನಡೆದ ಪ್ರತಿಭಟನೆಯನ್ನು ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಉದ್ಘಾಟಿಸಿದರು. ಬ್ಲೋಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಕಾರ್ಲೆ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣ ಪ್ರಭು, ಪೃಥ್ವಿರಾಜ್ ಶೆಟ್ಟಿ, ರವಿ ಪೂಜಾರಿ ಮಾತನಾಡಿದರು. ಡಾಲ್ಫಿ ಡಿಸೋಜಾ, ರಮೇಶ್ ಗಾಂಧಿನಗರ್, ರವಿರಾಜ್, ಶ್ರೀಧರ್ ರೈ, ನಾರಾಯಣ ಕಿದೂರು, ಪದ್ಮನಾಭ ಕಟ್ಟೆ, ಪೌಲ್ ರೋಡ್ರಿಗಸ್, ಇಬ್ರಾಹಿಂ ಬತ್ತೇರಿ, ಅಲಿ ಅರಿಕಾಡಿ ಭಾಗವಹಿಸಿದರು. ಚಂದ್ರ ಕಾಜೂರು ಸ್ವಾಗತಿಸಿ, ಖಮರುದ್ದೀನ್ ಪಾಡಲಡ್ಕ ವಂದಿಸಿದರು.