ಮಂಜೇಶ್ವರ: ಕೇರಳದ ಎಡರಂಗ ಸರಕಾರ ಹಾಗೂ ಕೇಂದ್ರದ ಬಿಜೆಪಿ ಸರಕಾರಗಳು ಜನತೆಗೆ ದ್ರೋಹ ಬಗೆಯುತ್ತಿದ್ದು, ಜನರನ್ನು ವಂ_ಸುವ ಮಾಡುವ ಕಾರ್ಯದಲ್ಲಿ ಪರಸ್ಪರ ಸ್ಪರ್ಧಿಸುತ್ತಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಫೈಸಲ್ ನುಡಿದರು.
ಫೆಬ್ರುವರಿ ೯ ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಕೆ.ಸುಧಾಕರನ್ ಮತ್ತು ವಿಪಕ್ಷ ನಾಯಕ ವಿ.ಡಿ. ಸತೀಶನ್ ಕಾಸರಗೋಡಿನಿಂದ ಆರಂಭಿಸಲಿರುವ ಸಮರಾಗ್ನಿ ಜನಾಂದೋಲನ ಯಾತ್ರೆಯ ಉದ್ಘಾ ಟನಾ ಸಮಾರಂಭವನ್ನು ಯಶಸ್ವಿಗೊಳಿಸಲು ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಿನ್ನೆ ನಡೆದ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ ಎಂ ಕೆ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಜಿಲ್ಲಾ ಉಸ್ತುವಾರಿ ಹೊಂದಿರುವ ಕೆ ಪಿ ಸಿ ಸಿ ಕಾರ್ಯ ದರ್ಶಿ ಸೈಮನ್ ಅಲೆಕ್ಸ್ ಮಾತನಾಡಿದರು. ಮಾಜಿ ಡಿಸಿಸಿ ಅಧ್ಯಕ್ಷರಾದ ಕೆ.ಪಿ.ಕುಂಞಕಣ್ಣನ್, ಹಕೀಂ ಕುನ್ನಿಲ್, ಕೆ .ಪಿ.ಸಿ.ಸಿ ಕಾರ್ಯದರ್ಶಿ ನೀಲಕಂ ಠನ್ ಕೆ. , ಡಿ ಸಿ ಸಿ ಪ್ರಧಾನ ಕಾರ್ಯದರ್ಶಿ ಗಳಾದ ಸೋಮಶೇಖರ್ ಜೆ ಎಸ್,ಸುಂದರ ಆರಿಕ್ಕಾಡಿ, ಎಂ ಸಿ ಪ್ರಭಾಕರನ್, ವಾಸುದೇವನ್ ನಾಯರ್, ಸೀತಾ ಡಿ,ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಗೀತಾ ಬಂದ್ಯೋಡು,ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯ ದರ್ಶಿ ಶಾಂತ ಆರ್ ನಾಯಕ್ ಮಾತನಾಡಿದರು.
