ಜನರಿಗೆ ಭೀತಿ ಹುಟ್ಟಿಸಿದ್ದ ಕಾಡುಹಂದಿ ಗುಂಡಿಗೆ ಬಲಿ

ಬೋವಿಕ್ಕಾನ: ಮುಳಿಯಾರು ಪಂಚಾಯತ್‌ನ ಆಲನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ಜನರಿಗೆ ಭೀತಿ ಸೃಷ್ಟಿಸಿದ್ದ ಕಾಡು ಹಂದಿಯನ್ನು  ಗುಂಡಿಕ್ಕಿ ಕೊಲ್ಲಲಾಯಿತು.

ಡಿಎಫ್‌ಒಕೆ ಅಶ್ರಫ್, ಡೆಪ್ಯುಟಿ ಫಾರೆಸ್ಟ್ ರೇಂಜ್ ಆಫೀಸರ್ (ಆರ್‌ಆರ್‌ಟಿ) ಎನ್.ವಿ. ಸತ್ಯನ್ ಎಂಬಿವರ ನೇತೃತ್ವದಲ್ಲಿ ರಾತ್ರಿ ಹೊತ್ತಿನಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಕಾಡು ಹಂದಿಯನ್ನು ಕೊಲ್ಲಲಾಗಿದೆ.  ಆಲನಡ್ಕದ ಮದ್ರಸಾ  ಪರಿಸರದಲ್ಲಿ ಅವಿತುಕೊಂಡಿದ್ದ ಹಂದಿಯನ್ನು ಸೀನಿಯರ್ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ  ತಂಡ ಇಂದು ಮುಂಜಾನೆ ಗುಂಡಿಕ್ಕಿ ಕೊಂದಿದೆ. ಹಂದಿಯ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸ ಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮದ್ರಸಾ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಭಯ ಹುಟ್ಟಿಸಿರುವ ಕಾಡು ಹಂದಿಯನ್ನು  ಕೊಲ್ಲಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಆಲೂರು ಟಿ.ಎ. ಮಹಮೂದ್ ಹಾಜಿ ಮನವಿ ಸಲ್ಲಿಸಿದರು. ಕಾಡು ಹಂದಿಯ ದಾಳಿಯಿಂದ  ದ್ವಿಚಕ್ರ ವಾಹನ ಸವಾರರು ಗಾಯಗೊಂಡಿರುವುದಾಗಿ ದೂರಲಾಗಿತ್ತು.

You cannot copy contents of this page