ಜನರು ನೋಡುತ್ತಿದ್ದಂತೆ ಯುವಕ ಬಾವಿಗೆ ಹಾರಿ ಸಾವು
ಕಾಸರಗೋಡು: ಜನರು ನೋಡುತ್ತಿದ್ದಂತೆಯೇ ಯುವಕನೋ ರ್ವ ಇಲಿವಿಷ ಸೇವಿಸಿದ ಬಳಿಕ ಬಾವಿಗೆ ಹಾರಿ ಸಾವಿಗೀಡಾದ ಘಟನೆ ನಡೆದಿದೆ.
ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಬ್ರಕಾನದ ಅನೀಶ್ (36) ಸಾವಿಗೀಡಾದ ಯುವಕ. ನಿನ್ನೆ ರಾತ್ರಿ 12 ಗಂಟೆಗೆ ಘಟನೆ ನಡೆದಿದೆ. ಈತ ನಿನ್ನೆ ಸಂಜೆ ಮನೆಯಲ್ಲಿ ಗಲಾಟೆಯೆಬ್ಬಿಸಿದ್ದನೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಸ್ಥಳಕ್ಕೆ ತಲುಪಿ ಅನೀಶ್‌ಗೆ ತಾಕೀತು ನೀಡಿದ್ದರೆನ್ನಲಾಗಿದೆ. ರಾತ್ರಿ ಮತ್ತೆ ಗಲಾಟೆ ಮಾಡಿದ್ದಾನೆನ್ನಲಾಗಿದೆ. ಇದರಿಂದ ಸ್ಥಳೀಯರು ಅಲ್ಲಿಗೆ ತಲುಪಿ ನೋಡುತ್ತಿದ್ದಂತೆ ಅನೀಶ್ ಬಾವಿಗೆ ಹಾರಿದ್ದಾನೆ. ವಿಷಯ ಲಭಿಸಿದ ಅಗ್ನಿಶಾಮಕದಳ ತಲುಪಿ ಅನೀಶ್‌ನನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಚೀಮೇನಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಲುಪಿಸಲಾಗಿದೆ.