ಜನವರಿ ೩೧ರೊಳಗೆ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ಚು. ಆಯೋಗ ನಿರ್ದೇಶ
ಕಾಸರಗೋಡು: ಲೋಕಸಭಾ ಚುನಾವಣೆ ಮುಂದಿನ ಎಪ್ರಿಲ್-ಮೇ ತಿಂಗಳೊಳಗಾಗಿ ನಡೆಯಲಿರುವಂ ತೆಯೇ ಅದಕ್ಕೆ ಪೂರ್ವಭಾವಿಯಾಗಿ ಜನವರಿ ೩೧ರೊಳಗಾಗಿ ಹಿರಿಯ ಅಧಿಕಾರಿಗಳ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದೆ. ಇದರಂತೆ ಒಂದೇ ಕಚೇರಿಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪೊಲೀಸರು, ಕಂದಾಯ ಇಲಾಖೆ ಸೇರಿದಂತೆ ಇತರ ಎಲ್ಲಾ ಸರಕಾರಿ ಅಧಿಕಾರಿಗಳನ್ನು ಸಾಮೂಹಿಕವಾಗಿ ಬೇರೆಡೆ ಜಿಲ್ಲೆಗೆ ವರ್ಗಾಯಿಸಲು ಕೇಂದ್ರ ಚುನಾವಣಾ ಆಯೋಗ ಕೇರಳದ ಮುಖ್ಯ ಚುನಾವಣಾ ಅಧಿಕಾರಿಯಾ ಗಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶ ನೀಡಿದೆ.
ಇದರಂತೆ ಪೊಲೀಸ್ ಮತ್ತು ಕಂದಾಯ ಇಲಾಖೆಯಲ್ಲಿ ಒಂದೇ ಸ್ಥಳದಲ್ಲಿ ಮೂರು ವರ್ಷ ಸೇವೆ ಈಗಾಗಲೇ ಪೂರೈಸಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳು, ಎಸ್‌ಐಗಳು,ಪೊಲೀಸರು ಮಾತ್ರವಲ್ಲ ಕಂದಾಯ ಇಲಾಖೆಯ ಅಧಿಕಾರಿ ಗಳನ್ನು ವರ್ಗಾಯಿಸಿ, ಅಂತಹಕ್ರಮವನ್ನು ಜನವರಿ ೩೧ರೊಳಗಾಗಿ ಪೂರ್ಣ ಗೊಳಿಸುವಂತೆಯೂ ಆಯೋಗ ನೀಡಿದ ನಿರ್ದೇಶದಲ್ಲಿ ಸ್ಪಷ್ಟಪಡಿಸಲಾ ಗಿದೆ. ಇದರಂತೆ ಕಾಸರಗೋಡು ಜಿಲ್ಲೆಯ ಪೊಲೀಸ್ ಮತ್ತು ಕಂದಾಯ ಇಲಾಖೆಯಲ್ಲಿ ಈ ನಿರ್ದೇಶ ಪ್ರಕಾರ ಮೂರು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಅಲ್ಲಾ ಅಧಿಕಾರಿಗಳ ಯಾದಿಯನ್ನು ತಯಾರಿಸುವ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಅದರ ಆಧಾರದಲ್ಲಿ ಇವರನ್ನು ಬೇರೆ ಇಲ್ಲಿಂದ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗುವುದು.
ಹೀಗೆ ವರ್ಗಾವಣೆಗೊಂಡವ ರನ್ನೆಲ್ಲಾ ಚುನಾವಣಾ ನೀತಿ ಸಂಹಿತೆಯ ಅವಧಿ ಕೊನೆಗೊಂಡ ಬಳಿಕವಷ್ಟೇ ತಮ್ಮ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ನಡೆಸಲಾಗುವುದು.