ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ: ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಗಳ ಅಪಹರಿಸಿ ಕೊಲೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತಾರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಗ್ರಾಮ ರಕ್ಷಣಾ ಗುಂಪಿನ ಸಮಿತಿಯ ಇಬ್ಬರು ಸದಸ್ಯರನ್ನು ಭಯೋತ್ಪಾದಕರು ಅಪಹರಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಕೊಲೆಗೀಡಾದವರನ್ನು ನಜೀರ್ ಅಹಮ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಇವರನ್ನು ಭಯೋತ್ಪಾದಕರು ನಿನ್ನೆ ಅಪಹರಿಸಿದ್ದರ. ತಕ್ಷಣ ಪೊಲೀಸರು ಶೋಧ ಆರಂಭಿಸಿದಾಗ ಆ ಇಬ್ಬರ ಶವ ಪತ್ತೆಯಾಗಿದೆ. ಭಯೋತ್ಪಾ ದಕರು ಅಪಹರಿಸಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಂತಕರನ್ನು ಪತ್ತೆಹಚ್ಚಲು ಭಾರೀ ಶೋಧ ಆರಂಭಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಯ ಜವಾಬ್ದಾರಿಯನ್ನು ಭಯೋತ್ಪಾದಕ ಗುಂಪು ಕಾಶ್ಮೀರ್ ಟೈಗರ್ಸ್ ವಹಿಸಿಕೊಂಡಿದೆ. ಓಹಿ-ಕುಂಟ್ವಾರ್ ನಿವಾಸಿಗಳಾದ ನಜೀರ್ ಅಹಮ್ಮದ್ ಮತ್ತು ಕುಲದೀಪ್ ಯಾದವ್ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿದ್ದಾರೆ. ನಿನ್ನೆ ಇವರು ಮುಂಜ್ಲಾಧಾರ್ ಅರಣ್ಯ ಬಳಿ ಹೋದವರು ಬಳಿಕ ಹಿಂತಿರುಗಲಿಲ್ಲ. ಆ ಬಗ್ಗೆ ಗ್ರಾಮದ ನಿವಾಸಿಗಳು ನೀಡಿದ ದೂರಿನಂತೆ ಪೊಲೀಸರು ಶೋಧ ಆರಂಭಿಸಿದ್ದಾರೆ. ನಂತರ ಈ ಇಬ್ಬರ ಶವ ಪತ್ತೆಯಾಗಿದೆ. ಈ ಇಬ್ಬರು ಅಮಾಯಕರ ಹತ್ಯೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಖಂಡಿಸಿದ್ದಾರೆ. ಇಂತಹ ಹಿಂಸಾಚಾರಗಳು ಶಾಶ್ವತ ಶಾಂತಿಗೆ ಅಡ್ಡಿಯಾಗುತ್ತಿದೆ. ಅಕ್ರಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ದುಷ್ಕೃತ್ಯವೆಸಗಿದ ‘ಕಾಶ್ಮೀರ್ ಟೈಗರ್ಸ್’ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್‌ನ ಒಂದು ಸಹ ಸಂಘಟನೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಜಮ್ಮು-ಕಾಶ್ಮೀರದ ಸೊಪೋರ್ನದಲ್ಲಿ ಭಯೋತ್ಪಾದಕರು ಮತ್ತು ಭದ್ರಾತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಇಬ್ಬರು ವಿದೇಶಿ ಭಯೋತ್ಪಾದಕರು ಮತ್ತು ಓರ್ವ ಸ್ವದೇಶಿ ಭಯೋತ್ಪಾದಕನನ್ನು ಭದ್ರತಾಪಡೆ ತಮ್ಮ ಬಲೆಗೆ ಬೀಳಿಸಿದೆ ಯೆಂದು ಮೂಲಗಳು ತಿಳಿಸಿವೆ.