ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನಗಳ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ನಗರದ ಜೋಗ್ವಾನ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭಯೋತ್ಪಾದಕರ ಗುಂಪು ಭಾರತೀಯ ಸೇನಾ ವಾಹನದ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೆರೆದಿದೆ. ಅದಕ್ಕೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡಿ ಓರ್ವ ಉಗ್ರನನ್ನು ಹೊಡೆದುರುಳಿಸಿದೆ. ಇಂದು ಬೆಳಿಗ್ಗೆ 7.25ಕ್ಕೆ ಜೋಗ್ವಾನ್ ಶಿವಸನ್ ದೇವಾಲಯದ ಬಳಿಯ ಬಚಾಲ್ ಪ್ರದೇಶದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಭಯೋತ್ಪಾದಕರು ಆಂಬುಲೆನ್ಸ್ ಸೇರಿದಂತೆ ಭಾರತೀಯ ಸೇನಾ ವಾಹನದ ಮೇಲೆ ಕನಿಷ್ಠ 15-20 ಸುತ್ತು ಗುಂಡು ಹಾರಿಸಿದ್ದಾರೆ. ಈ ಪ್ರದೇಶದ ಮನವರ್ ತಾವಿ ನದಿಯಿಂದ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಸೇನಾ ಸಿಬ್ಬಂದಿಗಳ ಮೇಲಿನ ದಾಳಿಯ ಇತಿಹಾಸ ಹೊಂದಿದೆ.
ಭಯೋತ್ಪಾದಕರು ಈ ಪ್ರದೇಶದ ಹಾಸನ ದೇವಾಲಯದಲ್ಲಿನ ವಿಗ್ರಹ ಗಳನ್ನು ವಿರೂಪಗೊಳಿಸಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಭಾರತೀಯ ಸೇನೆಯ ಈ ಪ್ರದೇಶವನ್ನಿಡೀ ಸುತ್ತುವರಿದಿದ್ದು ಭಯೋತ್ಪಾದನೆಗೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.
ಬೋಟಾ ಪತ್ರಿ ಪ್ರದೇಶದ ಪ್ರವಾಸಿ ತಾಣ ಗುಲ್ಮಾಗಿರಿಯಿಂದ ಆರು ಕಿಲೋ ಮೀಟರ್ ದೂರದಲ್ಲಿ ದಿನಗಳ ಹಿಂದೆ ಯಷ್ಟೇ ಭಯೋತ್ಪಾದಕರು ಗುಂಡು ಹಾರಿಸಿ ಇಬ್ಬರು ಸೈನಿಕರು ಮತ್ತು ಇಬ್ಬರು ಸೇನಾ ಪೋರ್ಟರ್‌ಗಳನ್ನು ಹತ್ಯೆಗೈದಿದ್ದಾರೆ. ಅದರ ಬೆನ್ನಲ್ಲೇ ಇಂದು ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದಾರೆ.