ಜಯರಾಮ ಸುವರ್ಣ ಸಂಭ್ರಮ 10ರಂದು ಬದಿಯಡ್ಕದಲ್ಲಿ
ಬದಿಯಡ್ಕ: ಜಯರಾಮ ಸುವರ್ಣ ಸಂಭ್ರಮ ಅಭಿನಂದನಾ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ ಜಯರಾಮ ಸುವರ್ಣ ಸಂಭ್ರಮ ಈ ತಿಂಗಳ 10ರಂದು ಬದಿಯಡ್ಕ ಗುರು ಸದನದಲ್ಲಿ ವಿವಿಧ ಕಾರ್ಯಕ್ರಮಗಳೊಂ ದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಉದ್ಯಮಿ ಗೋಪಾಲಕೃಷ್ಣ ಪೈ ದೀಪ ಪ್ರಜ್ವಲಿಸುವರು. ಬಳಿಕ ಅಷ್ಟದ್ರವ್ಯ ಸಹಿತ ಗಣಪತಿಹೋಮ, ಸರ್ವೈಶ್ವರ್ಯ ಗೌರೀ ಶಂಕರ ಪೂಜೆ, ಮಹಾಪೂಜೆ ನಡೆಯಲಿದೆ. 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವ ಚನ ನೀಡುವರು. ಮುಂಡಪ್ಪಳ್ಳ ಕ್ಷೇತ್ರದ ಅಧ್ಯಕ್ಷ ಕೆ.ಕೆ. ಶೆಟ್ಟಿ ಉದ್ಘಾಟಿಸುವರು. ಉದ್ಯಮಿ ಶಿವಶಂಕರ ನೆಕ್ರಾಜೆ ಅಧ್ಯಕ್ಷತೆ ವಹಿಸುವರು. ರವೀಶ ತಂತ್ರಿ ಕುಂಟಾರು, ಗಣಾಧಿರಾಜ ಉಪಾಧ್ಯಾಯ ಕೊಲ್ಲಂ ಗಾನ ಉಪಸ್ಥಿತರಿರುವರು. ಶಾಸಕ ಎನ್.ಎ. ನೆಲ್ಲಿಕುನ್ನು, ಸಂಕಬೈಲು ಸತೀಶ ಅಡಪ್ಪ, ಜಯದೇವ ಖಂಡಿಗೆ ಸಹಿತ ಹಲವು ಗಣ್ಯರು ಭಾಗವಹಿಸುವರು. ಈ ವೇಳೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹೊಸಮೂಲೆ ಗಣೇಶ್ ಭಟ್ (ಯಕ್ಷಗಾನ), ಶಂಕರ ನಾರಾಯಣ ಭಟ್ ಪೆರ್ಮುಂಡ (ಕೃಷಿ), ಕೇಶವ ರಾವ್ ಅಂಬುಕುಂಜೆ (ಕೂಡು ಕುಟುಂಬ), ನಾರಾಯಣ ಚೆಟ್ಟಿಯಾರ್ ಬದಿಯಡ್ಕ (ಹಿರಿಯ ವ್ಯಾಪಾರಿ), ಸಂ ಜೀವ ಗೋಳಿಯಡ್ಕ (ದೈವಾರಾಧನೆ), ವೆಂಕಟಭಟ್ ಎಡನೀರು (ಸಾಹಿತ್ಯ), ಕೆ.ವಿ. ರಮೇಶ್ ಕಾಸರಗೋಡು (ಯಕ್ಷಗಾನ ಬೊಂಬೆಯಾಟ), ಶ್ಯಾಮಲಾ ರೈ ಸಸಿಹಿತ್ಲು ಬೆಳ್ಳೂರು (ನಾಟಿವೈದ್ಯೆ), ಜನಾರ್ದನ ವಿದ್ಯಾಗಿರಿ (ಯಕ್ಷಗಾನ ವೇಷಭೂಷಣ ತಯಾರಿ), ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು (ಸಮಾಜಸೇವೆ) ಇವರನ್ನು ಸನ್ಮಾನಿಸಲಾಗುವುದು. 11 ಗಂಟೆಗೆ ತೆಂಕುತಿಟ್ಟು ಹಾಸ್ಯ ಕಲಾವಿದರಿಂದ ಯಕ್ಷಹಾಸ್ಯ ವೈಭವ ‘ಮಹಾನುಭಾವೆ’ ನಡೆಯಲಿದೆ. 12.30ಕ್ಕೆ ಪಿಂಗಾರ ಕಲಾವಿದೆರ್ ಬದಿಯಡ್ಕ ಇವರಿಂದ ಜಾನಪದ ರಸಮಂಜರಿ, ಅಪರಾಹ್ನ ೨ ಗಂಟೆಗೆ ಮಂಗಳೂರು ಯಕ್ಷತುಳು ಪರ್ಬ ಇವರಿಂದ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ ೫ ಗಂಟೆಗೆ ಜಯರಾಮ ಸುವರ್ಣ ಸಂಭ್ರಮ ಅಭಿ ನಂದನಾ ಸಮಾರಂಭ ನಡೆಯಲಿದ್ದು, ಅಭಿನಂದನಾ ಸಮಿತಿ ಅಧ್ಯಕ್ಷ ಸಂಜೀವ ಮೊಟ್ಟೆಕುಂಜ ಅಧ್ಯಕ್ಷತೆ ವಹಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕೃಷ್ಣಯ್ಯ ಅನಂತಪುರ, ಕುಳೂರುಕನ್ಯಾನ ಸದಾಶಿವ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಉಪಸ್ಥಿತರಿರುವರು. ಯಕ್ಷಗಾನಗುರು ಜಯರಾಮ ಪಾಟಾಳಿ ಪಡುಮಲೆ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಶಿವರಾಮ ಶೆಟ್ಟಿ ತಲ್ಲೂರು ಅಭಿನಂದನೆ ಪ್ರದಾನ ಮಾಡುವರು. ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡುವರು. ಹಲವರು ಭಾಗವಹಿಸುವರು. ಸಂಜೆ ೬.೩೦ರಿಂದ ಯಕ್ಷಪಲ್ಲವ ಟ್ರಸ್ಟ್ ಮಾಳಕೋಡ್ ಇವರಿಂದ ಚಿಂತನ ಹೆಗ್ಡೆ ಮಾಳಕೋಡ್ ಇವರ ನೇತೃತ್ವದಲ್ಲಿ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ‘ಮಾತೆ ಜಗನ್ನಾಥೆ’ ಪ್ರದರ್ಶನಗೊಳ್ಳಲಿದೆ. ಬಳಿಕ ಮಲ್ಲ, ಕೊಲ್ಲಂಗಾನ ಮೇಳದ ಕಲಾವಿದರಿಂದ ಜೋಡಾಟ ‘ಗದಾಯುದ್ಧ ಅಗ್ರಪೂಜೆ’ ಪ್ರದರ್ಶನಗೊಳ್ಳಲಿದೆ.